ನಿರೂಪಕ ಚಂದನ್ ಸಾವಿನಿಂದ ಮನನೊಂದ ಪತ್ನಿ, ತನ್ನ ಮಗನನ್ನು ಕೊಂದು ಆತ್ಮಹತ್ಯೆಗೆ ಯತ್ನ
ಕನ್ನಡದ ಕಿರುತೆರೆ ನಿರೂಪಕ ಚಂದನ್ ಇತ್ತೀಚೆಗಷ್ಟೇ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು ಪತಿಯ ಸಾವಿನಿಂದ ನೊಂದಿದ್ದ ಪತ್ನಿ ಮೀನಾ ಸಹ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ...
ಬೆಂಗಳೂರು: ಕನ್ನಡದ ಕಿರುತೆರೆ ನಿರೂಪಕ ಚಂದನ್ ಇತ್ತೀಚೆಗಷ್ಟೇ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು ಪತಿಯ ಸಾವಿನಿಂದ ನೊಂದಿದ್ದ ಪತ್ನಿ ಮೀನಾ ಸಹ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ದೊಡ್ಡಬಳ್ಳಾಪುರದ ತನ್ನ ಮನೆಯಲ್ಲಿ ಮೀನಾ ಮಗ 13 ವರ್ಷದ ತುಷಾರ್ ನ ಕತ್ತು ಕೊಯ್ದು ನಂತರ ಆಕೆ ಸಹ ಆ್ಯಸಿಡ್ ಕುಡಿದಿದ್ದಾರೆ. ಈ ವೇಳೆ ತುಷಾರ್ ಮೃತಪಟ್ಟಿದ್ದು ಮೀನಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥರಾಗಿರುವ ಮೀನಾ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕಳೆದ ಗುರುವಾರ ನಿರೂಪಕ ಚಂದನ್ ದಾವಣಗೆರೆ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು. ಚಂದನ್ ಮತ್ತು ಆತನ ಸ್ನೇಹಿತರು ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು.