ಯಶ್ ನಟನೆಯ 'ಕೆಜಿಎಫ್ ಅಟ್ಟರ್ ಫ್ಲಾಪ್ ಆಗುತ್ತೆ' ಅಂದವರಿಗೆ ಮಾತಿನೇಟು ಕೊಟ್ಟ ಜಗ್ಗೇಶ್

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಮಾತಿನಲ್ಲೇ ಚಾಟಿ ಬೀಸಿದ್ದಾರೆ...
ಯಶ್-ಜಗ್ಗೇಶ್
ಯಶ್-ಜಗ್ಗೇಶ್
Updated on: 
ಬೆಂಗಳೂರು: ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಮಾತಿನಲ್ಲೇ ಚಾಟಿ ಬೀಸಿದ್ದಾರೆ. 
ಕೆಜಿಎಫ್ ಚಿತ್ರಕ್ಕೆ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳು ಮೂಡಿಸಿವೆ. ಪಂಚ ಭಾಷೆಯಲ್ಲಿ ಡಿಸೆಂಬರ್ 21ಕ್ಕೆ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಝಿರೋ ಚಿತ್ರವು ಅಂದೇ ಬಿಡುಗಡೆ ಆಗಲಿದ್ದು ಕೆಜಿಎಫ್ ಚಿತ್ರ ಝಿರೋ ಚಿತ್ರದ ಮುಂದೆ ಫ್ಲಾಪ್ ಆಗುತ್ತದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಅಭಿಮಾನಿಯೊಬ್ಬರು ನಟ ಜಗ್ಗೇಶ್ ಗೆ ಟ್ಯಾಗ್ ಮಾಡಿದ್ದರು. 
ಇದಕ್ಕೆ ಜಗ್ಗೇಶ್ ತಮ್ಮ ಟ್ವೀಟರ್ ನಲ್ಲಿ ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೆ ಆಗಲಿ ಅವರ ಭುಜತಟ್ಟಿ ಹುರಿದುಂಬಿಸುವವನೆ ನಿಜವಾದ #ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸದಲಾಗದ ನಿಶ್ಪ್ರಯೋಜಕ!
ಹೆಮ್ಮೆಪಡಿ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ ನಮ್ಮಕಲಾಬಂಧುಗಳಿಂದ..
ಕನ್ನಡಚಿತ್ರರಂಗ ಕುತೂಹಲ ಮೂಡಿಸುತ್ತಿದೆ ಪರಭಾಷಿಕರಿಗೆ. ಹೆಮ್ಮೆಯಿಂದ ಜೈಅನ್ನಿ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com