ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ 'ಕೆಜಿಎಫ್': 2 ದಿನಗಳಲ್ಲಿ 25 ಮಿಲಿಯನ್'ಗೂ ಅಧಿಕ ಮಂದಿಯಿಂದ ಟ್ರೇಲರ್ ವೀಕ್ಷಣೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದು, ಚಿತ್ರದ ಟ್ರೇಲರ್'ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದೆ...
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ 'ಕೆಜಿಎಫ್': 2 ದಿನಗಳಲ್ಲಿ 25 ಮಿಲಿಯನ್'ಗೂ ಅಧಿಕ ಮಂದಿಯಿಂದ ಟ್ರೇಲರ್ ವೀಕ್ಷಣೆ
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ 'ಕೆಜಿಎಫ್': 2 ದಿನಗಳಲ್ಲಿ 25 ಮಿಲಿಯನ್'ಗೂ ಅಧಿಕ ಮಂದಿಯಿಂದ ಟ್ರೇಲರ್ ವೀಕ್ಷಣೆ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದು, ಚಿತ್ರದ ಟ್ರೇಲರ್'ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದೆ. 
ಕೆಜಿಎಫ್ ಟ್ರೇಲರ್'ನ್ನು ಬರೋಬ್ಬರಿ 25 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಈ ಮೂಲಕ ಕೆಜಿಎಫ್ ಚಿತ್ರ ಹೊಸ ದಾಖಲೆಯನ್ನು ಬರೆದಿದ್ದೆ. ಕನ್ನಡ ಸಿನಿಮಾವೊಂದು ಈ ರೀತಿ ದಾಖಲೆ ಮಾಡುತ್ತಿರುವುದು ಇದೇ ಮೊದಲಾಗಿದೆ. 
ಶುಕ್ರವಾರವಷ್ಟೇ ಕೆಜಿಎಫ್ ಟ್ರೇಲರ್ ಐದು ಭಾಷೆಗಳಲ್ಲಿ ತೆರೆ ಕಂಡಿತ್ತು. ಚಿತ್ರದ ಟ್ರೇಲರ್ ನೋಡಿದವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 5 ಭಾಷೆಗಳಲ್ಲಿ ತೆರೆಕಂಡಿರುವ ಈ ಟ್ರೇಲರ್ ನ ಒಟ್ಟು ವೀಕ್ಷಣೆ ಇದೀಗ 25 ಮಿಲಿಯನ್ ಗಡಿ ದಾಟುತ್ತಿದೆ. ಕೆಜಿಎಫ್ ಬರೆದಿರುವ ಈ ಸಾಧನೆಗೆ ಚಿತ್ರರಂಗದ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿಯೂ ಕೆಜಿಎಫ್ ಟ್ರೇಲರ್ ಟಾಪ್ 10ಗಳಲ್ಲಿ ಸ್ಥಾನ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com