ಮಂಗಳವಾರ ತಡರಾತ್ರಿ ರಿಯಾಮಿಕಾ ಅವರು ತಮ್ಮ ಸ್ನೇಹಿತ ದಿನೇಶನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾಳೆ. ಆದರೆ, ಕರೆ ಸ್ವೀಕರಿಸಿದ ದಿನೇಶ್ ಮರುದಿನ ಬೆಳಗ್ಗೆ ರಿಯಾಮಿಕಾಳಿಗೆ ವಾಪಸ್ ಕರೆ ಮಾಡಿದಾಗ ನಾಟ್ ರೀಚಬಲ್ ಆಗಿದೆ. ತಕ್ಷಣ ಮನೆಗೆ ಹೋಗಿ ಪ್ರಕಾಶ್ ಬಳಿ ಕೇಳಿದ್ದಾನೆ. ಪ್ರಕಾಶ್ ಹಾಗೂ ದಿನೇಶ್ ಆಕೆಯ ಕೋಣೆಯ ಬಳಿ ಹೋದಾಗ ಲಾಕ್ ಆಗಿದ್ದನ್ನು ಕಂಡು ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ, ತೆಗೆಯದಿದ್ದಾಗ ಪ್ರಕಾಶ್ ಕಿಟಕಿಯನ್ನು ಒಡೆದು ನೋಡಲು ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ.