ಡಿಸಿಪಿ ಅಣ್ಣಾಮಲೈ, ನಟ ದುನಿಯಾ ವಿಜಯ್
ಸಿನಿಮಾ ಸುದ್ದಿ
ದುನಿಯಾ ವಿಜಿ ಸೇರಿ 7 ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು !
ಪದೇ ಪದೇ ದುನಿಯಾ ವಿಜಯ್ ಕುಟುಂಬ ಜಗಳದಿಂದ ಬೇಸತ್ತ ಗಿರಿ ನಗರ ಠಾಣೆ ಪೊಲೀಸರು ದುನಿಯಾ ವಿಜಯ್ ಸೇರಿದಂತೆ ಏಳು ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ನಟ ದುನಿಯಾ ವಿಜಯ್ ವಿರುದ್ದ ಪೊಲೀಸರು ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪದೇ ಪದೇ ದುನಿಯಾ ವಿಜಯ್ ಕುಟುಂಬ ಜಗಳದಿಂದ ಬೇಸತ್ತ ಗಿರಿ ನಗರ ಠಾಣೆ ಪೊಲೀಸರು ದುನಿಯಾ ವಿಜಯ್ ಸೇರಿದಂತೆ ಏಳು ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಸಿಆರ್ ಪಿಸಿ ಸೆಕ್ಷನ್ 107ರ ಅಡಿಯಲ್ಲಿ ದುನಿಯಾ ವಿಜಯ್, ಅವರ ಪತ್ನಿಯರಾದ ನಾಗರತ್ನ, ಕೀರ್ತಿಗೌಡ , ವಿಜಯ್ ತಂದೆ , ನಾಗರತ್ನ ಸಹೋದರ ಹಾಗೂ ಮತ್ತಿಬ್ಬರು ಬಾಡಿಗಾರ್ಡ್ ಗಳ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಂದ 20 ಲಕ್ಷ ಬಾಂಡ್ ಬರೆಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಈ ಪ್ರಕರಣದಡಿಯಲ್ಲಿ ಕುಟುಂಬದಿಂದ ಕಾನೂನು ಸುವ್ಯವಸ್ಥೆ ಶಾಂತಿಗೆ ಭಂಗ ತಂದರೆ 20 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
ಪದೇ ಪದೇ ಕುಟುಂಬ ಜಗಳದಿಂದ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತಂದರೆ ಈ ವಿಶೇಷ ಸೆಕ್ಷನ್ ನಡಿ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ವಾರ್ನಿಂಗ್ ಮಾಡಿದ್ದಾರೆ.


