'ವೀರ ಮಹಾದೇವಿ' ಚಿತ್ರದಲ್ಲಿ ಸನ್ನಿ ನಟನೆಗೆ ವಿರೋಧ: ಕಾನೂನು ಕೈಗೆತ್ತಿಕೊಂಡರೆ ಕ್ರಮ- ಸುನೀಲ್ ಕುಮಾರ್

ವೀರ ಮಹಾದೇವಿ ಪಾತ್ರದಲ್ಲಿ ನೀಲಿ ಚಿತ್ರದ ತಾರೆ ಸನ್ನಿ ಲಿಯೋನ್ ನಟಿಸುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಪೊಲೀಸ್ ಆಯುಕ್ತರು ಮತ್ತು ಪ್ರತಿಭಟನೆ ಚಿತ್ರ
ಪೊಲೀಸ್ ಆಯುಕ್ತರು ಮತ್ತು ಪ್ರತಿಭಟನೆ ಚಿತ್ರ

ಬೆಂಗಳೂರು: ಕರ್ನಾಟಕ ಹೆಮ್ಮೆಯ ಪುತ್ರಿ ವೀರ ವನಿತೆ ಮಹಾದೇವಿ  ಕುರಿತು ನಿರ್ಮಾಣವಾಗುತ್ತಿರುವ ಚಲನಚಿತ್ರದಲ್ಲಿ ನೀಲಿ ಚಿತ್ರದ ತಾರೆ ಸನ್ನಿ ಲಿಯೋನ್  ವೀರ ಮಹಾದೇವಿ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಷ್ಟ್ರಕೂಟ ಅಮೋಘ ವರ್ಷ ನೃಪತುಂಗ ಅವರ ಕಥೆ ಆಧರಿಸಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ 5 ಭಾಷೆಗಳಲ್ಲಿ ವಿ.ಸಿ.ವಾಡಿ ಉದಯನ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚ ಲಾಗಿದ್ದು, ಮೂರನೆ ಗೋವಿಂದಂ ಅವರನ್ನು ಗುಲಾಮರು ಎಂಬಂತೆ ಚಿತ್ರಿಸಲಾಗುತ್ತಿದೆ.

ಬಹಳಷ್ಟು ವಿಷಯಗಳನ್ನು ತಿರುಚಿ ಇತಿಹಾಸಕ್ಕೆ ಅಪಚಾರ ಮಾಡಿರುವುದಲ್ಲದೆ ಕನ್ನಡಿಗರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲಾಗುತ್ತಿದೆ ಚಿತ್ರದ ಪಾತ್ರಧಾರಿಯನ್ನು ಬದಲಾವಣೆ ಮಾಡದೆ ಇದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಹೇಳಿವೆ.

ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಇಂತಹ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ.  ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರುವುದಿಲ್ಲ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com