ಬಾಲಿವುಡ್ ನಟ ನಾನಾ ಪಾಟೇಕರ್ ​ವಿರುದ್ಧ ತನುಶ್ರೀ ದತ್ತಾ 'ಲೈಂಗಿಕ ಕಿರುಕುಳ’ ಬಾಂಬ್​!

ಚಿತ್ರರಂಗಗಳಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತದೆ ಅನ್ನೋ ಆರೋಪಗಳು ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ಕೇಳಿ ಬರುತ್ತಿವೆ. ಬಾಲಿವುಡ್​ ನಟಿ ತನುಶ್ರೀ ದತ್ತಾ....
ತನುಶ್ರೀ ದತ್ತಾ
ತನುಶ್ರೀ ದತ್ತಾ
ಮುಂಬಯಿ: ಚಿತ್ರರಂಗಗಳಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತದೆ ಅನ್ನೋ ಆರೋಪಗಳು ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ಕೇಳಿ ಬರುತ್ತಿವೆ. ನಟಿ ಶ್ರೀರೆಡ್ಡಿ ಹಲವು ನಟ, ನಿರ್ದೇಶಕರು ತನಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಬಾಲಿವುಡ್​ನ ಮತ್ತೊಬ್ಬ ನಟಿ ಖ್ಯಾತ ನಟ ನಾನಾ ಪಾಟೇಕರ್​ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದ ಬಾಂಬ್​ ಸಿಡಿಸಿದ್ದಾರೆ.
ಝೂಮ್ ನಡೆಸಿದ ವಿಡಿಯೋ ಸಂದರ್ಶನದಲ್ಲಿ ಮಾತನಾಡಿರುವ ತನುಶ್ರೀ, ನಾನಾ ಪಾಟೇಕರ್ ಸಿನಿಮಾವೊಂದರ ಡ್ಯಾನ್ಸ್ ಚಿತ್ರೀಕರಣದ ವೇಳೆ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಮಹಿಳೆಯರ ಜೊತೆ ನಾನಾ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಇಡೀ ಬಾಲಿವುಡ್ ಗೆ ಗೊತ್ತು. ಸೆಟ್ ನಲ್ಲಿಯೇ ನಟಿಯರಿಗೆ ನಾನಾ ಪಾಟೇಕರ್ ಹೊಡೆಯುವ ಕೆಟ್ಟ ಚಾಳಿ ಮತ್ತು ಕಿರುಕುಳದ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಾರೆ.
ನಾನಾ ಪಾಟೇಕರ್ ಸಿನಿಮಾ ನಟಿಯರ ಜೊತೆಗಿನ ನಡವಳಿಕೆ ಬಗ್ಗೆ ಬಾಲಿವುಡ್ ಗೆ ಚೆನ್ನಾಗಿ ಗೊತ್ತಿದೆ. ಆದರೆ ಯಾವುದೇ ಮಾಧ್ಯಮಗಳು ಈ ಬಗ್ಗೆ ಬರೆಯುವ ಧೈರ್ಯ ತೋರಿಲ್ಲ ಎಂದು ತನುಶ್ರೀ ಆರೋಪಿಸಿದ್ದಾರೆ.
2008ರಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ ನಟಿ ತನುಶ್ರೀ, ಹಾರ್ನ್ ಓಕೆ ಪ್ಲೀಸ್ ಬಾಲಿವುಡ್ ಸಿನಿಮಾ ಚಿತ್ರೀಕರಣದ ಮೊಲದ ದಿನವೇ ನಾನಾ ಪಾಟೇಕರ್ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರ ಬಳಿ ದೂರಿದ್ದೆ, ಆದರೆ ಅದಕ್ಕೆ ಅವರು ನೀನು ನಾನಾ ಪಾಟೇಕರ್ ಬೇಡಿಕೆಗಳ ಬಗ್ಗೆ ಸಮ್ಮತಿಸಿ ಎಂದು ಹೇಳಿದ್ದರು, ಆದಾದ ನಂತರ ಆ ಹಾಡಿನ ಶೂಟಿಂಗ್ ನಿಂದ ನಾನು ಹೊರ ಬಂದೆ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com