ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಔಟ್ :  ಸ್ಟೈಲೀಶ್ ರಾಕಿ ಅವತಾರದಲ್ಲಿ ಯಶ್!

ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ನ್ನು ಯಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಇಂದು ಶೇರ್ ಮಾಡಿಕೊಂಡಿದ್ದಾರೆ. ಸೈಲೀಶ್ ರಾಕಿ ಅವತಾರದಲ್ಲಿ ಯಶ್ ಕಾಣಿಸಿಕೊಂಡಿದ್ದು, ನಾಲ್ಕು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆಯಾಗಿದೆ. 
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್
Updated on

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿದ್ದ ಬ್ಲಾಕ್ ಬೂಸ್ಟರ್ ಕೆಜಿಎಫ್ 1 ಚಿತ್ರದಿಂದಾಗಿ ಭಾರತೀಯ ಸ್ಟಾರ್ ಆಗಿ ಹೊರಹೊಮ್ಮಿದ ರಾಕಿಂಗ್ ಸ್ಟಾರ್ ಯಶ್ , ಅದರ ಮುಂದುವರೆದ ಭಾಗ ಚಾಪ್ಟರ್ 2 ನಲ್ಲೂ ಮತ್ತೆ ರಾಕಿಯಾಗಿ ಮಿಂಚಲಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ನ್ನು ಯಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಇಂದು ಶೇರ್ ಮಾಡಿಕೊಂಡಿದ್ದಾರೆ. ಸೈಲೀಶ್ ರಾಕಿ ಅವತಾರದಲ್ಲಿ ಯಶ್ ಕಾಣಿಸಿಕೊಂಡಿದ್ದು, ನಾಲ್ಕು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆಯಾಗಿದೆ. 

ಕೆಜಿಎಫ್ ಚಾಪ್ಟರ್ ರಲ್ಲಿ ರಾಕಿಬಾಯ್  ಗರುಡನನ್ನು ಕೊಂದು ಸೂರ್ಯವರ್ಧನ್ ಗೆ ನೀಡಿದ ವಾಗ್ದಾನದಂತೆ ಅಧೀರನನ್ನು ಸ್ವಾತಂತ್ರನಾಗಿ ಮಾಡಿರುತ್ತಾನೆ. ಚಾಪ್ಟರ್ -2 ನಲ್ಲಿ ರಾಕಿ ಮತ್ತು ಅಧೀರಾನ ನಡುವಿನ ಅಧಿಕಾರ ಹೋರಾಟದ ಸುತ್ತ ಚಿತ್ರ ಸಾಗಲಿದೆ. ಇದು ಎಲ್ಲ ಘರ್ಷಣೆಗಳ ತಾಯಿ ಎಂದು ನಿರ್ದೇಶಕರು ಬಣ್ಣಿಸಿದ್ದಾರೆ.

ಕೆಜಿಎಫ್ ಚಾಪ್ಟರ್ 2ನಲ್ಲಿ ಬಾಲಿವುಡ್ ನಟ ಸಂಜಯ್ ದತ್  ಅಧೀರಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ವರ್ಷದ ಆರಂಭದಲ್ಲಿಯೇ ಅಧೀರಾನ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕೆಜಿಎಫ್ ನಲ್ಲಿ ಈ ಪಾತ್ರ ಬಹು ಮುಖ್ಯವಾಗಿದೆ. ನಾನು ಹುಡುಕುತ್ತಿದ್ದ ಪಾತ್ರ ಕೊನೆಗೂ ಕೆಜಿಎಫ್ ಚಾಪ್ಟರ್ 2 ಮೂಲಕ ಸಿಕ್ಕಿದೆ ಎಂದು ಸಂಜಯ್ ದತ್ ಈ ಹಿಂದೆಯೇ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com