'ಅವತಾರ್ ಪುರುಷ'ನಾಗಿ ಶರಣ್

ನಟ ಶರಣ್ ಅವತಾರ್ ಪುರುಷನಾಗಿ ಬರುತ್ತಿದ್ದಾರೆ. ಪುಷ್ಕರ ಫಿಲ್ಮ್ಸ್ ನಿರ್ಮಿಸುತ್ತಿರುವ ಚಿತ್ರದ ಪೋಸ್ಟರ್ ನಿನ್ನೆ...
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್
Updated on

ನಟ ಶರಣ್ ಅವತಾರ್ ಪುರುಷನಾಗಿ ಬರುತ್ತಿದ್ದಾರೆ. ಪುಷ್ಕರ ಫಿಲ್ಮ್ಸ್ ನಿರ್ಮಿಸುತ್ತಿರುವ ಚಿತ್ರದ ಪೋಸ್ಟರ್ ನಿನ್ನೆ ಶರಣ್ ಹುಟ್ಟುಹಬ್ಬದ ದಿನ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿತು.

ಅವತಾರ ಪುರುಷ ಹೆಸರಿನ ಚಿತ್ರದಲ್ಲಿ 30 ವರ್ಷಗಳ ಹಿಂದೆ ಅಂಬರೀಷ್ ನಟಿಸಿದ್ದರು. ಇದೀಗ ಶರಣ್ ಅಭಿನಯದ ಚಿತ್ರಕ್ಕೆ ಸಹ ಈ ಶೀರ್ಷಿಕೆ ಹೊಂದಿಕೆಯಾಗುತ್ತದೆ ಎಂದು ಇಡಲಾಗಿದೆ ಎಂದರು ನಿರ್ದೇಶಕ ಸಿಂಪಲ್ ಸುನಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ಇದರ ನಿರ್ಮಾಪಕರು.ಮಹಾಭಾರತದ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯಂತೆ.

ಇಲ್ಲಿ ಶರಣ್ ಜ್ಯೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 11ರಿಂದ ಚಿತ್ರೀಕರಣ ಆರಂಭವಾಗಲಿದ್ದು ಚಿಕ್ಕಮಗಳೂರಿನಲ್ಲಿ ಬಹುತೇಕ ಚಿತ್ರೀಕರಣಗೊಳ್ಳಲಿದೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ವಿಲಿಯಮ್ ಡೇವಿಡ್ ಅವರ ಕ್ಯಾಮರಾ ಕೈಚಳಕವಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com