ಯಶ್-ಪುನೀತ್ ರಾಜಕುಮಾರ್
ಸಿನಿಮಾ ಸುದ್ದಿ
ಮೊದಲ ದಿನದ ಕೆಜಿಎಫ್ ದಾಖಲೆ ಧೂಳಿಪಟ ಮಾಡಿದ ಪುನೀತ್ ರಾಜಕುಮಾರ್ 'ನಟಸಾರ್ವಭೌಮ', ಇಲ್ಲಿದೆ ಮಾಹಿತಿ!
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಮೊದಲ ದಿನವೇ ಅಬ್ಬರಿಸಿದೆ. ಮಧ್ಯರಾತ್ರಿಯಿಂದ ಪ್ರದರ್ಶನ ಆರಂಭಿಸಿದ್ದ ನಟಸಾರ್ವಭೌಮ ಅವತಾರಕ್ಕೆ...
ಬೆಂಗಳೂರು: ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಮೊದಲ ದಿನವೇ ಅಬ್ಬರಿಸಿದೆ. ಮಧ್ಯರಾತ್ರಿಯಿಂದ ಪ್ರದರ್ಶನ ಆರಂಭಿಸಿದ್ದ ನಟಸಾರ್ವಭೌಮ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದ ಕೆಜಿಎಫ್ ಚಿತ್ರದ ದಾಖಲೆಯನ್ನು ನಟಸಾರ್ವಭೌಮ ಮುರಿದಿದೆ. ಕೆಜಿಎಫ್ ಚಿತ್ರ ಬೆಂಗಳೂರು ಒಂದರಲ್ಲೇ ಮೊದಲ ದಿನ ಬರೋಬ್ಬರಿ 525 ಪ್ರದರ್ಶನ ಕಂಡಿತ್ತು. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು. ಇನ್ನು ಪುನೀತ್ ಚಿತ್ರ ಈ ದಾಖಲೆ ಮುರಿದಿದ್ದು ಮೊದಲ ದಿನ ಬರೋಬ್ಬರಿ 550 ಪ್ರದರ್ಶನ ಕಾಣಲಿದೆ. ಗುರುವಾರ ತೆರೆಕಾಣಬೇಕಿದ್ದ ಚಿತ್ರವನ್ನು ಅಪ್ಪು ಅಭಿಮಾನಿಗಳು ಬುಧವಾರ ರಾತ್ರಿಯೇ ಬಿಡುಗಡೆ ಮಾಡಿಸಿದ್ದಾರೆ.
ಪುನೀತ್ ನಟಸಾರ್ವಭೌಮ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರನ್ ಅಭಿನಯಿಸಿದ್ದಾರೆ. ಪವನ್ ಒಡೆಯರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ