ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು.
ಶಾರುಖ್ ಖಾನ್
ಶಾರುಖ್ ಖಾನ್
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಇನ್ನು ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿತ್ತು. ಇದಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ತಾವು ದೇಶ ಬಿಡುವುದಾಗಿ ಹೇಳಿದ್ದಾರೆ ಎಂಬ ಸುದ್ದಿಗಳು ವರದಿಯಾಗುತ್ತಿವೆ.
ಭಾರತದಲ್ಲಿ ಪಾಕಿಸ್ತಾನದ ಕಲಾವಿದರನ್ನು ನಿಷೇಧಿಸಿದರೆ ತಾವು ಭಾರತ ಬಿಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆಂಬ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿ ಸೋಷಿಯಲ್ ಮೀಡಿಯಾ, ಸುಧೀರ್ ಚೌಧರಿ, ಭಾಜಪ ಮಿಷನ್ 2019, ಮೋದಿ ಮಿಷನ್ 2019 ಸೇರಿದಂತೆ ಅನೇಕ ಫೇಸ್ ಬುಕ್ ಪೇಜ್ ಗಳು ಈ ಸಂದೇಶವನ್ನು ಶೇರ್ ಮಾಡಿವೆ. ಕೇವಲ ಫೇಸ್ ಬುಕ್ ನಲ್ಲಿ ಮಾತ್ರವಲ್ಲದೆ ಟ್ವೀಟರ್, ವ್ಯಾಟ್ಸ್ ಆ್ಯಪ್ ಗಳಲ್ಲೂ ವೈರಲ್ ಆಗಿದೆ.
ಶಾರುಖ್ ಖಾನ್ ಈ ಹೇಳಿಕೆ ನೀಡಿದ್ದರಾ ಎಂದು ಪರಿಶೀಲಿಸಿದಾಗ ಇದ್ದೊಂದು ಸುಳ್ಳುಸುದ್ದಿ ಎಂಬುದು ತಿಳಿದುಬಂದಿದೆ. ವಾಸ್ತವವಾಗಿ ಖಾನ್ ಈ ರೀತಿಯ ಯಾವ ಹೇಳಿಕೆಯನ್ನು ನೀಡಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳೂ ವರದಿ ಮಾಡಿಲ್ಲ.
ಅಖಿಲ್ ಭಾರತ ಚಲನಚಿತ್ರ ಕಾರ್ಮಿಕ ಒಕ್ಕೂಟ(ಎಐಸಿಡಬ್ಲ್ಯೂಎ) ಫೆಬ್ರವರಿ 18ರಂದು ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಿತ್ತು. ಈ ಬಗ್ಗೆ ಶಾರುಕ್ ಖಾನ್ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com