ರಜನಿಕಾಂತ್
ಸಿನಿಮಾ ಸುದ್ದಿ
ಜಾಕ್ ಮಂಜುಗೆ ಕರ್ನಾಟಕದಾದ್ಯಂತ ರಜನಿಕಾಂತ್ 'ಪೆಟ್ಟಾ' ಚಿತ್ರದ ವಿತರಣೆ ಹಕ್ಕು!
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಇದೇ ಸಂಕ್ರಾತಿ ಹಬ್ಬಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಪೆಟ್ಟಾ ಚಿತ್ರದ ಕನ್ನಡ ಡಬ್ ಸೇರಿದಂತೆ...
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಇದೇ ಸಂಕ್ರಾತಿ ಹಬ್ಬಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಪೆಟ್ಟಾ ಚಿತ್ರದ ಕನ್ನಡ ಡಬ್ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಆವೃತ್ತಿಯನ್ನು ನಿರ್ಮಾಪಕ ಜಾಕ್ ಮಂಜು ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.
ಜನವರಿ 11ಕ್ಕೆ ರಾಜ್ಯದಲ್ಲಿ ಪೆಟ್ಟಾ ಚಿತ್ರ ಸುಮಾರು 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇನ್ನು ಕನ್ನಡೇತ್ತರ ನಟನ ಚಿತ್ರವೊಂದು ಇಷ್ಟೊಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಜನವರಿ 11ರಂದು ತಮಿಳು, ತೆಲುಗು ಮತ್ತು ಹಿಂದಿ ಆವೃತ್ತಿಯ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಯಾಗುತ್ತಿದ್ದು ಎರಡು ವಾರಗಳ ಬಳಿಕ ಕನ್ನಡ ಡಬ್ ಚಿತ್ರ ಬಿಡುಗಡೆಯಾಗಲಿದೆ ಎಂದು ಜಾಕ್ ಮಂಜು ತಿಳಿಸಿದ್ದಾರೆ.
ಕನ್ನಡೇತ್ತರ ಚಿತ್ರವನ್ನು ರಾಜ್ಯದಲ್ಲಿ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ರಜನಿಕಾಂತ್ ಅವರ ಜತೆ ಒಡನಾಟ ಇಟ್ಟುಕೊಂಡಿದ್ದೆ. ಆದರೆ ಇದೇ ಮೊದಲ ಬಾರಿಗೆ ಅವರ ಚಿತ್ರವನ್ನು ವಿತರಣೆ ಮಾಡುತ್ತಿದ್ದೇನೆ ಎಂದು ಜಾಕ್ ಮಂಜು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ