'ಪೆಟ್ಟಾ' ಕನ್ನಡಕ್ಕೆ ರಜನಿಕಾಂತ್ ಅವರೇ ಖುದ್ದು ಡಬ್ ಮಾಡಲಿ: ವಿತರಕ ಜಾಕ್ ಮಂಜು ಮನವಿ

ಸ್ವತಃ ರಜನೀಕಾಂತ್ ಅವರೇ ಪೆಟ್ಟಾ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಬೇಕೆಂದು ಜಾಕ್ ಮಂಜುನಾಥ್ ಒತ್ತಾಯಿಸಿದ್ದಾರೆ
ರಜನಿಕಾಂತ್
ರಜನಿಕಾಂತ್
Updated on
ಬೆಂಗಳೂರು: ರಜನೀಕಾಂತ್ ಅಭಿನಯದ ಪೆಟ್ಟಾ ಸಿನಿಮಾ ಕನ್ನಡಕ್ಕೆ ಡಬ್ ಆಗಲಿದ್ದು, ಕರ್ನಾಟಕದಲ್ಲಿ ವಿತರಣೆ ಹಕ್ಕನ್ನು  ಜಾಕ್ ಮಂಜುನಾಥ್ ಪಡೆದುಕೊಂಡಿದ್ದಾರೆ, ಹೀಗಾಗಿ ಸ್ವತಃ ರಜನೀಕಾಂತ್ ಅವರೇ ಪೆಟ್ಟಾ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಪೆಟ್ಟಾ ಸಿನಿಮಾ ಜನವರಿ 11 ರಂದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ್ಲಲಿ ರಿಲೀಸ್ ಆಗಲಿದೆ. ರಜನೀಕಾಂತ್ ಅವರೇ ಕನ್ನಡದಲ್ಲಿ ಪೆಟ್ಟಾ ಸಿನಿಮಾ ಡಬ್ ಮಾಡಿದರ್ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.
ಒಂದು ವೇಳೆ ರಜನಿಕಾಂತ್ ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಒಪ್ಪಿದರೇ ಕರ್ನಾಟಕದಲ್ಲಿ  ಪೆಟ್ಟಾ ಸಿನಿಮಾವನ್ನು ಜನವರಿ 25 ಕ್ಕೆ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com