ದೊಡ್ಡ ಬಂಡೆಯೊಂದರ ಬೆಣಚುಕಲ್ಲು ನಾನು, ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದೇನೆ: ಸುದೀಪ್

ಐಟಿ ದಾಳಿ ಎಂದರೆ ದೊಡ್ಡ ಬಂಡೆ ಇದ್ದಹಾಗೆ, ಅದರಲ್ಲಿ ನಾನೊಂದು ಬೆಣಚುಕಲ್ಲು. ನಾನು ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದು ನಿಜ, ಮುಂದೆ ಇಂತಹದು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ.....
ಸುದೀಪ್
ಸುದೀಪ್
Updated on: 
ಬೆಂಗಳೂರು: ಐಟಿ ದಾಳಿ ಎಂದರೆ ದೊಡ್ಡ ಬಂಡೆ ಇದ್ದಹಾಗೆ, ಅದರಲ್ಲಿ ನಾನೊಂದು ಬೆಣಚುಕಲ್ಲು. ನಾನು ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದು ನಿಜ, ಮುಂದೆ ಇಂತಹದು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ ಎಂದು ಸ್ಯಾಂಡಲ್ ವುಡ್ ನಟ ಸುದೀಪ್ ಹೇಳಿದ್ದಾರೆ.
ಚಿತ್ರರಂಗದ ನಿರ್ಮಾಪಕ, ನಟರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬಳಿಕ ಸೋಮವಾರ ಬೆಂಗಳೂರು ಕ್ವೀನ್ಸ್ ರಸ್ತೆ ಆದಾಯ ತೆರಿಗೆ ಇಲಾಖೆ ಕಛೇರಿಗೆ ವಿಚಾರಣೆಗಾಗಿ ಹಾಜರಾಗಿದ್ದ ನಟ ಮಾದ್ಯಮದವರೊಡನೆ ಮಾತನಾಡಿದ್ದಾರೆ.
"ವಿಚಾರಣೆ ಇನ್ನೂ ಮುಗಿದಿಲ್ಲ. 5-6 ತಿಂಗಳು ವಿಚಾರಣೆ ನಡೆಯುವುದಿದೆ. ನನ್ನ ಮನೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಹೇಳಿಕೆ ನೀಡಿ ಸಹಿ ಮಾಡಿದ್ದೇನೆ.ಈ ಕುರಿತಂತೆ ಮಾತನಾಡಲು ಅಧಿಕಾರಿಗಳು ನನ್ನನ್ನು ಇಂದು ಇಲ್ಲಿಗೆ ಕರೆದಿದ್ದರು. ನಾನೇನಾದರೂ ನನ್ನ ಹೇಳಿಕೆಯಲ್ಲಿ ಬದಲಾವಣೆ ಮಾಡಲಿದ್ದೇನೆಯೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.
"ವಿಚಾರಣೆ ಇನ್ನೀಗ ಪ್ರಾರಂಭವಾಗಲಿದೆ. ಎಲ್ಲಾ  ಪವರ್ ಆಫ್ ಅಟಾರ್ನಿಯನ್ನು ನಾನು ನಮ್ಮ ಆಡಿಟರ್‌ಗೆ ನೀಡಿದ್ದು ಮುಂದಿನ ದಿನಗಳಲ್ಲಿ ಅವರೇ ವಿಚಾರಣೆಗೆ ಹಾಜರಾಗುತ್ತಾರೆ." ನಟ ವಿವರಿಸಿದ್ದಾರೆ.
ಇದು ಐಟಿ ರೇಡ್ ಅಲ್ಲ ಸರ್ಚ್ ಅಷ್ಟೇ ಎಂದ ನಟನಾನೇನೂ ಬೇಕೆಂದು ತಪ್ಪು ಮಾಡಿಲ್ಲ, ಮಾಡಿದ್ದರೆ ಅದು ಅಳಿಲಿನಷ್ಟು ತಪ್ಪು ಮಾಡಿರಬಹುದು. ಆದರೆ ಐಟಿ ಇಲಾಖೆ ಎನ್ನುವ ದೊಡ್ಡ ಬಂಡೆಯಲ್ಲಿ ನಾನೊಂದು ಬೆಣಚುಕಲ್ಲಷ್ಟೇ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹಾ ತಪ್ಪು ಮರುಕಳಿಸದಂತೆ ಎಚರ ವಹಿಸುವುದಾಗಿಯೂ ಸುದೀಪ್ ಹೇಳಿದ್ದಾರೆ.
ಇದೇ ವೇಳೆ ಸುದೀಪ್ ಮುಂದಿನ ಚಿತ್ರ "ಪೈಲ್ವಾನ್ " ಚಿತ್ರೀಕರಣ ಸಾಗಿದ್ದು  ನಾಳೆ (ಜನವರಿ 15) ರಂದು ಚಿತ್ರದ ಕನ್ನಡ ಟೀಸರ್ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com