ಯಶ್ 'ಕೆಜಿಎಫ್' ಚಿತ್ರ ನೋಡಿ ವಾವ್ಹಾ ಎಂದು ಉದ್ಘರಿಸಿದ ತಮಿಳು ದಳಪತಿ ವಿಜಯ್, ಯಶ್ ಬಗ್ಗೆ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಬಿಗುಡಗೆಯಾಗಿ ದಾಖಲೆ ನಿರ್ಮಿಸಿದ್ದು ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.
ಯಶ್-ವಿಜಯ್
ಯಶ್-ವಿಜಯ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಬಿಗುಡಗೆಯಾಗಿ ದಾಖಲೆ ನಿರ್ಮಿಸಿದ್ದು ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.
ಇನ್ನು ಕೆಜಿಎಫ್ ಚಿತ್ರ ಸೃಷ್ಟಿಸಿದ್ದ ಹವಾಗೆ ಬೆರಗಾಗಿದ್ದ ತಮಿಳಿನ ದಳಪತಿ ವಿಜಯ್ ಅವರು ತಮ್ಮ ಬ್ಯುಸಿ ಕೆಲಸದ ಮಧ್ಯೆಯೂ ಚಿತ್ರವನ್ನು ನೋಡಿ ಚಿತ್ರತಂಡ ಹಾಗೂ ಯಶ್ ರನ್ನು ಹಾಡಿ ಹೊಗಳಿದ್ದಾರೆ. 
ವಿಜಯ್ ಗಾಗಿ ಚೆನ್ನೈನಲ್ಲಿ ಕೆಜಿಎಫ್ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ತಮಿಳು ಆವೃತಿಯ ಕೆಜಿಎಫ್ ಸಿನಿಮಾ ವೀಕ್ಷಿಸಿದ ದಳಪತಿ ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಇಡೀ ತಂಡಕ್ಕೆ ಶುಭ ಹಾರೈರಿಸಿದ್ದಾರೆ.
ಇನ್ನು ಕೆಜಿಎಫ್ ಚಿತ್ರ ಅದ್ಧೂರಿ ಪ್ರದರ್ಶನ ಕಂಡಿದ್ದು 200 ಕೋಟಿಗೂ ಹೆಚ್ಚು ಹಣ ಗಳಿಸುವ ಮೂಲಕ ಕನ್ನಡ ಚಿತ್ರವೊಂದು 200 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com