ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್: 'ನಿಮ್ಮ ಪ್ರೀತಿಯ ದಾಸ' ಹೇಳಿದ್ದು ಯಾರಿಗೆ?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಕುತೂಹಲಕಾರಿ ಟ್ವೀಟ್ ಮಾಡಿದ್ದು, ಮತ್ತೊಬ್ಬ ಸೆಲೆಬ್ರಿಟಿಗೆ ಓಪೆನ್ ಚಾಲೆಂಜ್ ಹಾಕುವ ಬಗ್ಗೆ ಮಾತನಾಡಿದ್ದಾರೆ....
ದರ್ಶನ್
ದರ್ಶನ್
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಕುತೂಹಲಕಾರಿ ಟ್ವೀಟ್ ಮಾಡಿದ್ದು, ಮತ್ತೊಬ್ಬ ಸೆಲೆಬ್ರಿಟಿಗೆ ಓಪೆನ್ ಚಾಲೆಂಜ್ ಹಾಕುವ ಬಗ್ಗೆ ಮಾತನಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ದರ್ಶನ್ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ ನಿಮ್ಮ ದಾಸ ದರ್ಶನ್ ಎಂದು ದಚ್ಚು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇಂದು ಬೆಳಗ್ಗೆ 6.19ಕ್ಕೆ ದರ್ಶನ್ ಮಾಡಿರುವ ಟ್ವೀಟ್ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಲ್ಲದೆ ಯಾವ ಸೆಲೆಬ್ರಿಟಿಗೆ  ಚಾಲೆಂಜ್ ಹಾಕುತ್ತಾರೆ? ದರ್ಶನ್ ಅವರೇ ಬೇರೆ ನಟರಿಗೆ ಚಾಲೆಂಜ್ ಮಾಡಲಿದ್ದಾರಾ? ಅಥವಾ ಬೇರೆಯವರ ಚಾಲೆಂಜ್‍ಯನ್ನು ದಾಸ ಸ್ವಾಗತಿಸಲಿದ್ದಾರಾ? ಎನ್ನುವ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿದ್ದು, ಬೆಳ್ಳಂಬೆಳಗ್ಗೆ ಏನಪ್ಪಾ ಈ ಚಾಲೆಂಜ್? ಅಂತ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com