'ಒ' ಮಿಲನಾ ನಾಗರಾಜ್ ಪಾಲಿನ ಚೊಚ್ಚಲ ಹಾರರ್ ಚಿತ್ರ!

ಮಹೇಶ್ ನಿರ್ದೇಶನದ ಹೊಸ ಚಿತ್ರಕ್ಕೆ ಒಂದೇ ಅಕ್ಷರದ ಶೀರ್ಷಿಕೆ ಇಡಲಾಗಿದೆ.ಇದು ಇಬ್ಬರು ಸೋದರಿಯರ ಸುತ್ತ ಹೆಣೆದ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಜತೆಯಾಗಿ ಮಿಲನಾ ನಾಗರಾಜ್....
ಮಿಲನಾ ನಾಗರಾಜ್
ಮಿಲನಾ ನಾಗರಾಜ್
ಬೆಂಗಳೂರು: ಮಹೇಶ್ ನಿರ್ದೇಶನದ ಹೊಸ ಚಿತ್ರಕ್ಕೆ ಒಂದೇ ಅಕ್ಷರದ ಶೀರ್ಷಿಕೆ ಇಡಲಾಗಿದೆ.ಇದು ಇಬ್ಬರು ಸೋದರಿಯರ ಸುತ್ತ ಹೆಣೆದ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಜತೆಯಾಗಿ ಮಿಲನಾ ನಾಗರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಗ್ಲಾಮರಸ್, ಕೌಟುಂಬಿಕ ಚಿತ್ರಗಳಷ್ಟೇ ಮಿಂಚಿದ್ದ ನಟಿ ಇದೇ ಮೊದಲ ಬಾರಿಗೆ ವಿಶೇಷ ಕಥಾನಕವೊಂದರಲ್ಲಿ ಅಭಿನಯಿಸುತ್ತಿದ್ದಾರೆ.  ಇನ್ನು ಹಾರರ್-ಥ್ರಿಲ್ಲರ್ ಕಥಾನಕ ಹೊಂದಿರುವ "ಒ" ಚಿತ್ರ ತನ್ನ ಶಿರ್ಷಿಕೆಯಿಂದಲೇ ಗಮನ ಸೆಳೆದಿದೆ. ಮಿಲನಾ  ಅವರ ಪಾಲಿಗೆ ಇದು ಮೊದಲ ಹಾರರ್ ಚಿತ್ರ. ಇನ್ನು ನಿರ್ದೇಶಕ ಮಹೇಶ್ ಸಹ ಈ ಚಿತ್ರದ ಮುಖೇನ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.
ಮಿಲನಾ ನಾಗರಾಜ್ ಇದಾಗಲೇ ಚಿತ್ರದ ಐವತ್ತು ಪ್ರತಿಶತ ಶೂಟಿಂಗ್ ಮುಗಿಸಿದ್ದಾರೆ. ಇನ್ನು ಕೇವಲ 20 ದಿನಗಳ ಶೂಟಿಂಗ್ ಡೇಟ್ಸ್ ಮಾತ್ರ ಬಾಕಿ ಇದೆ. ಚಿತ್ರದಲ್ಲಿ ಮಿಲನಾ ಅವರ ಪಾತ್ರದ ಕೆಲ ವು ಫಸ್ಟ್ ಲುಕ್ ಚಿತ್ರಗಳು ಪತ್ರಿಕೆಗೆ ಲಭ್ಯವಾಗಿದೆ.
"ನಾನು ಬಯಸುತ್ತಿದ್ದ ಬದಲಾವಣೆ "ಒ" ಮೂಲಕ ದೊರಕಿದೆ" ಮಿಲನಾ ಹೇಳಿದ್ದಾರೆ. ಮಿಲನಾ "ನಮ್ ದುನಿಯಾ ನಮ್ ಸ್ಟೈಲ್" ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
"ಪ್ರತಿ ಬಾರಿಯೂ ನಿರ್ದೇಶಕರು ನನ್ನನ್ನು ಗ್ಲಾಮರ್ ಗೊಂಬೆಯನ್ನಾಗಿಯೋ, ಸಾಮಾನ್ಯ ಕಾಲೇಜು ವಿದ್ಯಾರ್ಥಿನಿಯನ್ನಾಗಿಯೋ ತೋರಿಸಿದ್ದರು. ಆದರೆ "ಒ" ಮಾತ್ರ ವಿಭಿನ್ನ ಕಥಾಹಂದರ ಹೊಂದಿದ ಚಿತ್ರ"
"ಒ" ಇದಾಗಲೇ ಹೇಳಿದಂತೆ ಅಕ್ಕ-ತಂಗಿಯರ ಕಥಾನಕ. ಅಮೃತ ಅಯ್ಯಂಗಾರ್ ಇನ್ನೊಂದು ಮುಖ್ಯ ಪಾತ್ರಧಾರಿಯಾಗಿ ಕಾಣಿಸಲಿದ್ದಾರೆ.  ಇದಕ್ಕೆ ಮುನ್ನ ಈ ಇಬ್ಬರೂ ನಟಿಯರು ನಟ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಶ್ರೀಕಂತ್ ಸಂಕಲನವಿದ್ದರೆ ದಿಲೀಪ್  ಛಾಯಾಗ್ರಹಣ ಹಾಗೂ ಕಿರಣ್ ರವೀಂದ್ರನಾಥ್ ಸಂಗೀತವಿದೆ.
"ಗ್ಲಾಮರ್ ಪಕ್ಕಕ್ಕಿಟ್ಟು ಈ ಚಿತ್ರವು ನನಗೆ ನಿಜವಾದ ನಟನೆಗಾಗಿ ಅವಕಾಶ ಕಲ್ಪಿಸಿದೆ.ನಾನು ಈ ಹೊಸ ಪ್ರಯೋಗದ ಕುರಿತು ಉತ್ಸುಕಳಾಗಿದ್ದೇನೆ.ಜಾನಿಯ ನಂತರ, ಅದೇ ತರದ ಪಾತ್ರಗಳು ಬರತೊಡಗಿದ್ದವು,. ಣಾನು ಸಹ ಬದಲಾವಣೆ ಬಯಸಿ ಹೊಸ ಬಗೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ."ಮಿಲನಾ ಹೇಳಿದ್ದಾರೆ.
ಮಿಲನಾ ಇದೀಗ ಲವ್ ಮಾಕ್ ಟೇಲ್ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಬಳಿಕ "ಒ" ಚಿತ್ರದ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ. ಇದಾದ ನಂತರ ನಟಿ ತಮಿಳಿನಲ್ಲಿ ತನ್ನ ಸಾಮರ್ಥ್ಯ ಪರೀಕ್ಷೆಗೆ ತೊಡಗುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com