ವಾರಾಂತ್ಯದಲ್ಲಿ ದಬಾಂಗ್-3 ಶೂಟಿಂಗ್ ನಲ್ಲಿ ಸುದೀಪ್ ಭಾಗಿ

ಪೈಲ್ವಾನ್ ಹಾಗೂ ಕೋಟಿಗೊಬ್ಬ ಚಿತ್ರಗಳನ್ನ ಬಹುತೇಕ ಮುಗಿಸಿರುವ ಕಿಚ್ಚ ಸುದೀಪ್ ಈಗ ಬಾಲಿವುಡ್ ಗೆ ಜಿಗಿಯುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್ 3 ಚಿತ್ರದ ...
ಸುದೀಪ್
ಸುದೀಪ್
Updated on: 
ಪೈಲ್ವಾನ್ ಹಾಗೂ ಕೋಟಿಗೊಬ್ಬ ಚಿತ್ರಗಳನ್ನ ಬಹುತೇಕ ಮುಗಿಸಿರುವ ಕಿಚ್ಚ ಸುದೀಪ್ ಈಗ ಬಾಲಿವುಡ್ ಗೆ ಜಿಗಿಯುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್ 3 ಚಿತ್ರದ ಶೂಟಿಂಗ್ ನಲ್ಲಿ ಸುದೀಪ್ ಶನಿವಾರದಿಂದ ಪಾಲ್ಗೋಳ್ಳಲಿದ್ದಾರೆ. 
ದಬಾಂಗ್ 3 ಚಿತ್ರವನ್ನ ಪ್ರಭುದೇವ ನಿರ್ದೇಶನ ಮಾಡ್ತಿದ್ದಾರೆ. ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ,. 
ಈಗಾಗಲೇ ದಬಾಂಗ್ 3 ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮುಂದಿನ ವಾರದಲ್ಲಿ ಸುದೀಪ್ ದಬಾಂಗ್ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ. ದಶಕದ ನಂತರ ಸುದೀಪ್ ಬಾಲಿವುಡ್ ಗೆ ಮತ್ತೆ ಪ್ರಯಾಣ ಮುಂದುವರಿಸಿದ್ದಾರೆ, 
ಸಲ್ಮಾನ್ ಖಾನ್, ಸುದೀಪ್ ಸೇರಿದಂತೆ ಸೋನಾಕ್ಷಿ ಸನ್ಹಾ, ಅರ್ಬಾಜ್ ಖಾನ್, ಮಹೀ ಗಿಲ್, ನಿಖ್ತಿನ್ ಧೀರ್ ಇನ್ನು ಹಲವರು ನಟಿಸಲಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com