ದ್ವಿಪಾತ್ರದಲ್ಲಿ ಮತ್ತೆ ಉಪೇಂದ್ರ!

ಪ್ರಜಾಕೀಯ ಬಳಿಕ ಇದೀಗ ಸಿನಿಮಾದಲ್ಲಿ ಉಪೇಂದ್ರ ಸಕ್ರಿಯರಾಗುತ್ತಿದ್ದಾರೆ. ಹೌದು ಉಪೇಂದ್ರ ತಮ್ಮ ಮುಂದಿನ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಉಪೇಂದ್ರ
ಉಪೇಂದ್ರ
Updated on: 
ಪ್ರಜಾಕೀಯ ಬಳಿಕ ಇದೀಗ ಸಿನಿಮಾದಲ್ಲಿ ಉಪೇಂದ್ರ ಸಕ್ರಿಯರಾಗುತ್ತಿದ್ದಾರೆ. ಹೌದು ಉಪೇಂದ್ರ ತಮ್ಮ ಮುಂದಿನ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರೆ. 
ಉಪೇಂದ್ರ ಅಭಿನಯದ ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈ ಮಧ್ಯೆ ಕಳೆದ ವರ್ಷವೇ ಅಧಿಕೃತ ಘೋಷಣೆಯಾಗಿ ನಿಂತಿದ್ದ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ. ಟಿಆರ್ ಚಂದ್ರಶೇಖರ್ ನಿರ್ಮಾಣದ ಚಿತ್ರದಲ್ಲಿ ಉಪ್ಪಿ ನಟಿಸುತ್ತಿದ್ದು ಚಿತ್ರದ ಮುಹೂರ್ತ ಮೇ 24ರಂದು ನಡೆಯಲಿದೆ. 
ಉಪೇಂದ್ರ ಅವರ ನೂತನ ಚಿತ್ರಕ್ಕೆ ಇನ್ನು ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರದ ಮೂಲಕ ಡಿಎನ್ ಮೌರ್ಯ ಚೊಚ್ಚಲ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಇನ್ನು ಚಿತ್ರದಲ್ಲಿ ತತ್ವಜ್ಞಾನಿ ಪಾತ್ರದಲ್ಲಿ ಅಭಿನಯಿಸಿದರೆ ಮತ್ತೊಂದು ಪಾತ್ರವನ್ನು ನಿರ್ದೇಶಕರು ಸಸ್ಪೆನ್ಸ್ ನಲ್ಲಿ ಇಟ್ಟಿದ್ದಾರೆ.
ಉಪ್ಪಿ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ. ಇದಕ್ಕೂ ಮೊದಲೇ ತ್ರಿಪಾತ್ರದಲ್ಲಿ ಹಾಲಿವುಡ್ ನಲ್ಲಿ, ದ್ವಿಪಾತ್ರದಲ್ಲಿ ಸೂಪರ್ ಸ್ಟಾರ್, ಗಾಡ್ ಫಾದರ್ ಮತ್ತು ಉಪೇಂದ್ರ ಮತ್ತೆ ಬಾ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಬುದ್ಧಿವಂತ 2 ಅಥವಾ ಪಿತಾಮಹ ಎಂದು ಹೆಸರಿಡಲು ಚಿತ್ರ ತೀರ್ಮಾನಿಸಿದೆ. ಆದರೆ ಉಪೇಂದ್ರ ಅದಾದಲೇ ಬುದ್ದಿವಂತ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದು ಪಿತಾಮಹ ಶೀರ್ಷಿಕೆ ಫೈನಲ್ ಆಗಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com