ಆ್ಯಕ್ಟ್ 1978ರಲ್ಲಿ ಕುತೂಹಲ ಮೂಡಿಸಿದ ಯಜ್ಞಾಶೆಟ್ಟಿ ಲುಕ್

ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶಿಸುತ್ತಿರುವ ಮೂರನೇ ಚಿತ್ರಕ್ಕೆ ಆ್ಯಕ್ಟ್-1978 ಎಂದು ಹೆಸರಿಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. 
ಆ್ಯಕ್ಟ್ 1978ರಲ್ಲಿ ಕುತೂಹಲ ಮೂಡಿಸಿದ ಯಜ್ಞಾಶೆಟ್ಟಿ ಲುಕ್
ಆ್ಯಕ್ಟ್ 1978ರಲ್ಲಿ ಕುತೂಹಲ ಮೂಡಿಸಿದ ಯಜ್ಞಾಶೆಟ್ಟಿ ಲುಕ್
Updated on

ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶಿಸುತ್ತಿರುವ ಮೂರನೇ ಚಿತ್ರಕ್ಕೆ ಆ್ಯಕ್ಟ್-1978 ಎಂದು ಹೆಸರಿಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. 

ಚಿತ್ರದ ಪೋಸ್ಟರ್'ನಲ್ಲಿ ನಟಿ ಯಜ್ಞಾಶೆಟ್ಟಿ ಇದ್ದು, ಪೋಸ್ಟರ್ ನಲ್ಲಿ ಯಜ್ಞಾಶೆಟ್ಟಿ ಲುಕ್ ಭಾರೀ ಕುತೂಹಲ ಮೂಡಿಸಿದೆ. ಪೋಸ್ಟರ್ ನಲ್ಲಿ ಯಜ್ಞಾಶೆಟ್ಟಿಯವರನ್ನು ನೋಡಿದ ಕೂಡಲೇ ಬೇರೆಯದ್ದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಭಾವನೆ ಮೂಡಿ ಬರುತ್ತಿದೆ. 

ತುಂಬು ಗರ್ಭಿಣಿ, ಗರ್ಭಿಣಿ ದೇಹಕ್ಕೆ ಬಾಂಬು ಸುತ್ತಿಕೊಂಡು, ಕೈಯಲ್ಲಿ ವೈರ್'ಲೆಸ್ ಫೋನ್ ಜೊತೆಗೆ ಪಿಸ್ತೂಲು ಹಿಡಿದು ಕುಳಿತಿರುವ ಯಜ್ಞಾಶೆಟ್ಟಿಯವರು ಲುಕ್ ಸಾಕಷ್ಟು ಕುತೂಹಲವನ್ನು ಮೂಜಡಿಸಿದೆ. 

ಆ್ಯಕ್ಟ್ 1978 ಮಂಸೋರೆಯವರ ಮೂರನೇ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರಕ್ಕೆ ಕಥೆಗೆ ಪೂರಕವಾಗಿ ಆ್ಯಕ್ 1978 ಎಂದು ಹೆಸರಿಡಲಾಗಿದ್ದು, ಚಿತ್ರದಲ್ಲಿ ಯಜ್ಞಾಶೆಟ್ಟಿ ಸೇರಿದಂತೆ ಬಿ.ಸುರೇಶ್ ಪ್ರಮೋದ್ ಶೆಟ್ಟಿ, ಹಿರಿಯ ಕಲಾವಿದೆ ಶ್ರುತಿ, ದತ್ತಣ್ಣ, ಅಚ್ಯುತ ಕುರ್ಮಾ, ಅವಿನಾಶ್, ಶೋಭರಾಜ್, ಸುಧಾ ಬೆಳವಾಡಿ, ಕವಲುದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಶರಣ್ಯ ಮುಂತಾದವರು ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com