ಮ್ಯಾಗ್ವೆನ್ 'ಸೇಂಟ್ ಮಾರ್ಕ್ಸ್ ರೋಡ್' ನಲ್ಲಿ ಪ್ರಿಯಾಂಕಾ ಉಪೇಂದ್ರ

"ಜನನಂ"(2004೦ ನಲ್ಲಿ ಕಡೇ ಬಾರಿಗೆ ತಮಿಳಿನಲ್ಲಿ ಕಾಣಿಸಿಕೊಂಡ  ನಟಿ ಪ್ರಿಯಾಂಕಾ ಉಪೇಂದ್ರ ಬರೋಬ್ಬರಿ ಹದಿನೈದು ವರ್ಷಗಳ ನಂತರ ಮತ್ತೆ ಕಾಲಿವುಡ್ ಗೆ ಎಂಟ್ರಿಯಾಗುತ್ತಿದ್ದಾರೆ. 
ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ
Updated on: 

"ಜನನಂ"(2004೦ ನಲ್ಲಿ ಕಡೇ ಬಾರಿಗೆ ತಮಿಳಿನಲ್ಲಿ ಕಾಣಿಸಿಕೊಂಡ  ನಟಿ ಪ್ರಿಯಾಂಕಾ ಉಪೇಂದ್ರ ಬರೋಬ್ಬರಿ ಹದಿನೈದು ವರ್ಷಗಳ ನಂತರ ಮತ್ತೆ ಕಾಲಿವುಡ್ ಗೆ ಎಂಟ್ರಿಯಾಗುತ್ತಿದ್ದಾರೆ. ಈ ಬಾರಿ ಅವರು "ಸೇಂಟ್ ಮಾರ್ಕ್ಸ್ ರೋಡ್" ಎಂಬ ಕನ್ನಡ-ತಮಿಳು ದ್ವಿಭಾಷಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ  ಬಿಗ್ ಬಾಸ್ ತಮಿಳು ಖ್ಯಾತಿಯ ಮಹತ್ ರಾಘವೇಂದ್ರ ಮತ್ತು ಯಶಿಕಾ ಆನಂದ್ ಅಭಿನಯವಿದೆ. ಈ ಚಿತ್ರದ ಫಸ್ಟ್ ಲುಕ್ ಅನ್ನು ಉಪೇಂದ್ರ ಅವರು ಅನಾವರಣ ಮಾಡಿದ್ದಾರೆ.

"ಸೇಂಟ್ ಮಾರ್ಕ್ಸ್ ರೋಡ್" ‘ಡೆತ್ ಎಂಡ್’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ದ್ವಿಭಾಷಾ ಚಿತ್ರವನ್ನು ಮಗೇಶ್ ಹಾಗೂ ವೆಂಕಟೇಶ್ (ಮ್ಯಾಗ್ವೆನ್’) ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರ ಪ್ರಕಾರ, ಈ ಚಿತ್ರವು ಅವಳಿ ಸಹೋದರಿಯರಾದ ತೇರಾ ಮತ್ತು ವೆರಾ ಅವರ ಜೀವನದ ನೈಜ ಘಟನೆಯನ್ನಾಧರಿಸಿದೆ. ಅಲ್ಲಎ ಇದರಲ್ಲೊಂದು ಸಾಮಾಜಿಕ ಸಂದೇಶ ಅಡಕವಾಗಿದೆ.

"ಪ್ರಿಯಾಂಕಾ ಅವರ ಪಾತ್ರವು ಚಿತ್ರದ ತಿರುಳು" ಎಂದು ವೆಂಕಟೇಶ್ ಹೇಳುತ್ತಾರೆ ಈ ಚಿತ್ರದ ಭಯಾನಕ ಥ್ರಿಲ್ಲರ್ ವಿಷಯವು ಬೆಂಗಳೂರಿಗೆ ಬಹಳ ಪ್ರಸ್ತುತವಾಗಿದೆ ಎಂದು ಅವರು ಹೇಳುವ ನಿರ್ದೇಶಕ ಇದಾಗಲೇ ಚಿತ್ರೀಕರಣ ಮುಗಿದಿದ್ದು ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದಿದ್ದಾರೆ.

"ಸೇಂಟ್ ಮಾರ್ಕ್ಸ್ ರೋಡ್" ಅನ್ನು  ಭರತನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್.ವಿ.ಭರತನ್ ನಿರ್ಮಿಸಿದ್ದಾರೆ. . ಎಸ್ ತಮನ್ ಸಂಗೀತ ಹೊಂದಿರುವ ಈ ಚಿತ್ರದಲ್ಲಿ ಸರವೆಂಕಟೇಶ್, ಮಾ ಕಾ ಪಾ ಆನಂದ್, ಮನೋಬಲ  ಮತ್ತು ನಿರ್ದೇಶಕ ಕೆ.ಎಸ್.ರವಿಕುಮಾರ್ ಕೆಲಸವಿದೆ.

ಏತನ್ಮಧ್ಯೆ, ಪ್ರಿಯಾಂಕಾ ಉಪೇಂದ್ರ ಅವರು ಕನ್ನಡದಲ್ಲಿ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ನಿರ್ದೇಶಕ ಪಿ ವಾಸು ಅವರ ಸಹೋದರ ಪಿ.ವಿಮಲ್ ಬರೆದ ಚಿತ್ರಕಥೆಗಾಗಿ ಅವರು ನಿರ್ದೇಶಕ ಗೌತಮ್ ವಿ.ಪಿ ಅವರೊಂದಿಗೆ ಕೆಲಸ ಮಾಡಲು ತಯಾರಿ ನಡೆಸಿದ್ದಾರೆ. ಗುರುಮೂರ್ತಿಯವರ ನಿರ್ದೇಶನದ ಉಗ್ರವತಾರ ಎಂಬ ಹೆಸರಿನ ಚಿತ್ರದಲ್ಲಿ ಸಹ ಪ್ರಿಯಾಂಕಾ ಅಭಿನಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com