ಅಂಬರೀಶ್ ಮೊದಲ ವರ್ಷದ ಪುಣ್ಯತಿಥಿ: ಪತಿ ನೆನೆದು ಭಾವುಕರಾದ ಸುಮಲತಾ

ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿ ಗುರುವಾರ ನೆರವೇರಿದೆ.
ಸುಮಲತಾ
ಸುಮಲತಾ
Updated on: 

ಬೆಂಗಳೂರು: ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿ ಗುರುವಾರ ನೆರವೇರಿದೆ.

ಕಳೆದ ವರ್ಷ ನವೆಂಬರ್ ೨೪ರಂದು ಅಂಬರೀಶ್ ಮೃತಪಟ್ಟಿದ್ದರಾದರೂ, ನಕ್ಷತ್ರದ ಪ್ರಕಾರ ೧೦ ದಿನಗಳ ಮೊದಲೇ ಪುಣ್ಯತಿಥಿ ನಡೆಸಲಾಗಿದೆ.

ಇಂದು ಬೆಳಗ್ಗೆ ೧೦ ಗಂಟೆ ವೇಳೆಗೆ ಸುಮಲತಾ, ಅಂಬರೀಶ್ ಕುಟುಂಬಸ್ಥರು ಸೇರಿದಂತೆ ನಟ ದರ್ಶನ್ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. 
ಈ ವೇಳೆ ರೆಬೆಲ್ ಸ್ಟಾರ್ ಅಭಿಮಾನಿಗಳು ಸೇರಿದಂತೆ, ಸಿನಿಮಾ ಮತ್ತು ರಾಜಕೀಯ ಗಣ್ಯರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅವರು, ಒಂದು ವರ್ಷ ಕಳೆದು ಹೋಗಿದ್ಯಾ ಎನಿಸುತ್ತಿದೆ. ಅವರು ಎಲ್ಲಿ ಹೋದ್ರೂ ನೆನಪಾಗ್ತಾರೆ. ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬಿ ಅವರೇ. ಪ್ರತಿಕ್ಷಣ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಪತಿಯನ್ನು ನೆನಪಿಸಿಕೊಂಡು ಭಾವುಕರಾದರು.

ಇದೇ ವೇಳೆ ಅಂಬಿ ಸ್ಮಾರಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾರಕ ನಿರ್ಮಾಣ ಕಾರ್ಯ ತಡವಾಗುತ್ತಿದೆ. ಈಗ ಫಿಲಂ ಚೇಂಬರ್ ಮೂಲಕ ಸರ್ಕಾರವನ್ನು ಸಂಪರ್ಕ ಮಾಡುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com