'ಗಂಟುಮೂಟೆ' ಚಿತ್ರದ ಟ್ರೈಲರ್ ನೋಡಿದ ಕಿಚ್ಚಾ ಸುದೀಪ್ ಹೇಳಿದ್ದೇನು?

ಹೊಸ ಪ್ರತಿಭೆಗಳು ಸೇರಿ ಮಾಡಿರುವ ಗಂಟುಮೂಟೆ ಚಿತ್ರದ ಟ್ರೈಲರ್ ಗೆ ನಟ ಕಿಚ್ಚಾ ಸುದೀಪ್ ಫುಲ್ ಫಿದಾ ಆಗಿದ್ದು, ಈ ಕುರಿತಂತೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಗಂಟುಮೂಟೆ ಚಿತ್ರದ ಟ್ರೈಲರ್ ಮತ್ತು ಸುದೀಪ್
ಗಂಟುಮೂಟೆ ಚಿತ್ರದ ಟ್ರೈಲರ್ ಮತ್ತು ಸುದೀಪ್

ಹೈಸ್ಕೂಲ್ ಪ್ರೀತಿಯ ಕಥೆಗೆ ಅಭಿನಯ ಚಕ್ರವರ್ತಿ ಫುಲ್ ಫಿದಾ

ಬೆಂಗಳೂರು: ಹೊಸ ಪ್ರತಿಭೆಗಳು ಸೇರಿ ಮಾಡಿರುವ ಗಂಟುಮೂಟೆ ಚಿತ್ರದ ಟ್ರೈಲರ್ ಗೆ ನಟ ಕಿಚ್ಚಾ ಸುದೀಪ್ ಫುಲ್ ಫಿದಾ ಆಗಿದ್ದು, ಈ ಕುರಿತಂತೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಹೌದು... ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಗೀತಿ, ಇತರೆ ಚಟ ಹತ್ತಿಸಿಕೊಂಡ ವಿದ್ಯಾರ್ಥಿಗಳ ಕುರಿತಾದ ಗಂಟುಮೂಟೆ ಚಿತ್ರದ ಟ್ರೈಲರ್ ಈ ಹಿಂದೆ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಇದೇ ಟ್ರೈಲರ್ ಗೆ ನಟ ಕಿಚ್ಚಾ ಸುದೀಪ್ ಕೂಡ ಬೋಲ್ಡ್ ಆಗಿದ್ದು, ಅದ್ಭುತ ಚಿಂತನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.

ಆ ಮೂಲಕ ಚಿತ್ರದ ತಂಡಕ್ಕೆ ಶುಭಕೋರಿರುವ ಸುದೀಪ್, ಒಂದು ಸಣ್ಣ ಟ್ರೈಲರ್ ಸಾವಿರಾರು ಮಾತುಗಳನ್ನಾಡುತ್ತಿದೆ ಎಂದು ಬರೆಯುವ ಮೂಲಕ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೆ ನೀವು ಕೂಡ ಟ್ರೈಲರ್ ನೋಡಿ ಚಿತ್ರತಂಡಕ್ಕೆ ಬೆಂಬಲ ನೀಡಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು ಈ ಹಿಂದೆ ನಟಿ ಶ್ರದ್ಧಾ ಶ್ರೀನಾಥ್ ಕೂಡ ಗಂಟುಮೂಟೆ ಚಿತ್ರದ ಕುರಿತಂತೆ ಮಾತನಾಡಿ ಚಿತ್ರಕ್ಕೆ ಬೆಂಬಲ ನೀಡಿದ್ದರು. ಅಲ್ಲದೆ ವಿಡಿಯೋದಲ್ಲಿ ಖುದ್ಧು ಮಾತನಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com