ಪೌರತ್ವ ಕಾಯ್ದೆ ಕುರಿತು ಸ್ಯಾಂಡಲ್'ವುಡ್ ಮೌನ: ಅಭಿಮಾನಿಗಳು, ಪ್ರತಿಭಟನಾಕಾರರು ಅಸಮಾಧಾನ

ಸಾಮಾಜಿಕ ವಿಚಾರಗಳ ಬಗ್ಗೆ ಪ್ರತೀ ಬಾರಿ ಜನರೊಂದಿಗೆ ದನಿ ಎತುತ್ತಿದ್ದಿ ಸ್ಯಾಂಡಲ್'ವುಡ್ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಇಡೀ ದೇಶವೇ ಹೊತ್ತು ಉರಿಯುತ್ತಿದ್ದರೂ ಮೌನ ವಹಿಸಿರುವುದು ಅಭಿಮಾನಿಗಳು ಹಾಗೂ ಪ್ರತಿಭಟನಾಕಾರರು ಅಸಮಾಧಾನಗೊಳ್ಳುವಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಮಾಜಿಕ ವಿಚಾರಗಳ ಬಗ್ಗೆ ಪ್ರತೀ ಬಾರಿ ಜನರೊಂದಿಗೆ ದನಿ ಎತುತ್ತಿದ್ದಿ ಸ್ಯಾಂಡಲ್'ವುಡ್ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಇಡೀ ದೇಶವೇ ಹೊತ್ತು ಉರಿಯುತ್ತಿದ್ದರೂ ಮೌನ ವಹಿಸಿರುವುದು ಅಭಿಮಾನಿಗಳು ಹಾಗೂ ಪ್ರತಿಭಟನಾಕಾರರು ಅಸಮಾಧಾನಗೊಳ್ಳುವಂತೆ ಮಾಡಿದೆ. 

ಪ್ರಕಾಶ್ ರಾಜ್, ಚೇತನ್ ಅಹಿಂಸಾ ಹಾಗೂ ಉಪೇಂದ್ರ ಬಿಟ್ಟರೆ, ಬೇರಾವುದೇ ನಾಯಕ, ನಾಯಕಿಯರು ಕಾಯ್ದೆ ಕುರಿತು ತುಟಿಬಿಚ್ಚದೆ ಇರುವುದು ಅಭಿಮಾನಿಗಳಲ್ಲಿ ಬೇಸರವನ್ನು ತರಿಸಿದೆ. 

ಸ್ಯಾಂಡಲ್ ವುಡ್ ಅಭಿಮಾನಿ ವಿಶ್ವನಾಥ್ ಎಂಬುವವರು ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಕಾಶ್ ರಾಜ್ ಹಾಗೂ ಚೇತನ್ ಅವರನ್ನು ಬಿಟ್ಟರೆ ಚಿತ್ರರಂಗದಲ್ಲಿ ಮತ್ತಾವುದೇ ನಟ, ನಟಿಯವರು ಪ್ರತಿಕ್ರಿಯೆ ನೀಡಿಲ್ಲ. ನಿಮ್ಮ ಉಪೇಂದ್ರ ಅವರು ಪೌರತ್ವ ಮಸೂದೆ ಹಾಗೂ ಎನ್ಆರ್'ಸಿ ಬಗ್ಗೆ ಮಾತನಾಡಿದ್ದು, ಅವರ ನಿಲುವು ಮಾತ್ರ ಅರ್ಥವೇ ಆಗಲಿಲ್ಲ. ಆದರೆ, ಅವರ ಗಮನವೆಲ್ಲಾ ದೇಶದ ಆರ್ಥಿಕತೆ, ಉದ್ಯೋಗ ಹಾಗೂ ಇತರೆ ವಿಚಾರಗಳ ಬಗ್ಗೆಯೇ ಇದೆ ಎಂದು ಹೇಳಿದ್ದಾರೆ. 

ಯಶ್ ಅಭಿಮಾನಿ ರಾಮನಾಥಾನ್ ಎಂಬುವವರು ಮಾತನಾಡಿ, ಸಾಕಷ್ಟು ಸಾಮಾಜಿ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ವ್ಯಕ್ತಿ ಇದೀಗ ಮೌನ ತಾಳಿರುವುದನ್ನು ನೋಡಿದರೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಮಂಡ್ಯ ಚುನಾವಣೆ ವೇಳೆ ಸುಮಲತಾ ಬೆನ್ನಿಗೆ ನಿಂತು ಬೆಂಬಲ ನೀಡಿದ್ದರು. ಕಾಯ್ದೆ ಕುರಿತು ಅವರು ಮಾತನಾಡಿದ್ದನ್ನು ಎಲ್ಲಿಯೂ ಕೇಳಲೇ ಇಲ್ಲ. ಸಾಮಾಜಿಕ ಜಾಲತಾಣದಲ್ಲೂ ಅವರು ಮಾತನಾಡಿದ್ದನ್ನು ನೋಡಿಲ್ಲ. ಈ ಮೌನ ನಮ್ಮ ಸಮಾಜಕ್ಕೆ ಅಪಾಯಕಾರಿಯಾದದ್ದು ಎಂದು ಹೇಳಿದ್ದಾರೆ. 

ಇಂದು ನಮ್ಮೊಂದಿಗೆ ಪ್ರಕಾಶ್ ರಾಜ್ ಇರಬೇಕಿತ್ತು. ಗೌರಿ ಲಂಕೇಶ್ ಸಾವು ಬಗ್ಗೆ ಮಾತನಾಡಿದ್ದ ಪ್ರಕಾಶ್ ಅವರು, ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು, ಮೋದಿ ವಿರುದ್ಧ ಹಲವು ಟ್ವೀಟ್ ಗಳನ್ನು ಮಾಡಿದ್ದರು. ಇದೀಗ ಅವರ ಆಸಕ್ತಿ ಎಲ್ಲಿ ಹೋಯಿತು ಎಂದು ಪೂಜಾ ಗೌಡ ಅವರು ಪ್ರಶ್ನಿಸಿದ್ದಾರೆ. 

ಈ ನಡುವೆ ಕೆಎಫ್ಸಿಸಿ ಅಧ್ಯಕ್ಷ ಚಿನ್ನೇ ಗೌಡ ಅವರು ಆಶ್ಚರ್ಯ ಎಂಬಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಯ್ದೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸುವ ಬದಲು ಏನದು ವಿಚಾರ? ಯಾವುದಕ್ಕಾಗಿ ಪ್ರತಿಭಟಿಸುತ್ತಿದ್ದಾರೆಂದು ಮರು ಪ್ರಶ್ನೆ ಹಾಕಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. 

ನಮಗೆ ವಿಚಾರವೇನೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಬಳಿಕವಷ್ಟೇ ಪ್ರತಿಭಟಿಸುತ್ತೇವೆ. ಈ ಬಗ್ಗೆ ಕುಳಿತು ಮಾತನಾಡಿ ನಿಲುವು ತಾಳುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಬಾರದು ಎಂದು ತಿಳಿಸಿದ್ದಾರೆ. 

ನಮ್ಮ ಹೀರೋಗಳು ರಾಷ್ಟ್ರಪ್ರೇಮ ಪ್ರದರ್ಶಿಸದೇ ಇರುವುದು ನೋಡಿದರೆ ಬೇಸರವಾಗುತ್ತಿದೆ. ಕರ್ನಾಟಕದಲ್ಲಿ ಕೆಲವರು ಕಾಶ್ಮೀರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ನಮ್ಮ ಹೀರೋಗಳು ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ನಟ ದರ್ಶನ್ ಅಭಿಮಾನಿ ರಾಜೇಂದ್ರ ಕುಮಟ ಹೇಳಿದ್ದಾರೆ. 

ಈ ನಡುವೆ ವಿಚಾರ ಸಂಬಂಧ ಚಿತ್ರರಂಗದ ನಾಯಕ ಹಾಗೂ ನಾಯಕಿಯರನ್ನು ಸಂಪರ್ಕಿಸಲು ಯತ್ನ ನಡೆಸಲಾಗಿದ್ದು, ಈ ವೇಳೆ ಹಲವು ನಾಯಕ ಹಾಗೂ ನಾಯಕಿಯರು ವಿವಾದದಲ್ಲಿ ಸಿಲುಕಿಕೊಳ್ಳಲು ನಮಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. 

ಹಿರಿಯ ನಟ ಹಾಗೂ ಬಿಜೆಪಿ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಇಂತಹ ವಿಚಾರದಲ್ಲಿ ನಟ ಹಾಗೂ ನಟಿಯರು ಮಾತನಾಡದೇ ಇರುವುದಕ್ಕೆ ಸಾಕಷ್ಟು ಕಾರಣಗಳಿವೆ. ಅದನ್ನು ವಿವರಿಸುವುದು ಕಷ್ಟ. ನಾನೂ ಕೂಡ ವಿವಾದದಲ್ಲಿ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. 

ಇನ್ನು ವಿವಾದದ ಬಗ್ಗೆ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ದೇವೇಗೌಡ ಅವರ ಕುಟುಂಬ ಕೂಡ ಮೌನ ತಾಳಿರುವುದು ಹಲವರಲ್ಲಿ ಬೇಸರ ತರಿಸಿದೆ. ನಿಖಿಲ್ ಕುಮಾರಸ್ವಾಮಿಯವರು ತಮ್ಮ ಮೊಬೈಲ್ ಫೋನ್ ಸ್ವಿಟ್ಚ್ ಆಫ್ ಮಾಡಿದ್ದು, ತಮಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮೌನ ತಾಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com