ಈ ಬಾರಿ ಕ್ರಿಸ್‍ಮಸ್‍ ಹಬ್ಬಕ್ಕೆ ‘ರಾಬರ್ಟ್’ ತರ್ತಾನೆ ವಿಶೇಷ ಉಡುಗೊರೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಭರ್ಜರಿ ಸುದ್ದಿ ಹೊರಬಿದ್ದಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. 
ರಾಬರ್ಟ್
ರಾಬರ್ಟ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಭರ್ಜರಿ ಸುದ್ದಿ ಹೊರಬಿದ್ದಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. 

ಸಿನಿಮಾ ಸೆಟ್ಟೇರಿದಾಗಿನಿಂದಲೂ ರಾಬರ್ಟ್ ದರ್ಶನಕ್ಕಾಗಿ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ದೊಡ್ಡ ಸಂಭ್ರಮದ ಸುದ್ದಿ ಚಿತ್ರತಂಡದಿಂದ ಬಂದಿದೆ. ಹೌದು, ರಾಬರ್ಟ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ.

ಕ್ರಿಸ್ ಮಸ್ ಗೆ ರಾಬರ್ಟ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಮೊದಲ ಪೋಸ್ಟರ್ ಬೈಕ್ ಮೇಲೆ ಕುಳಿತಿರುವ ದರ್ಶನ್ ಹಿಂಬದಿಯ ಲುಕ್ ಮಾತ್ರ ರಿಲೀಸ್ ಮಾಡಲಾಗಿತ್ತು. ದರ್ಶನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಮೊದಲ ಪೋಸ್ಟರ್ ನಿಂದ ಉತ್ತರ ಸಿಕ್ಕಿರಲಿಲ್ಲ. ಹಾಗಾಗಿ ಸದ್ಯ ರಿಲೀಸ್ ಆಗುತ್ತಿರುವ ಪೋಸ್ಟರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ರಾಬರ್ಟ್ ದರ್ಶನ್ ಅಭಿನಯದ ಐವತ್ತಮೂರನೇ ಚಿತ್ರ. ಇದಕ್ಕೆ ಈ ಹಿಂದೆ "ಚೌಕ" ನಿರ್ದೇಶನ ಮಾಡಿ ಹೆಸರಾಗಿದ್ದ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿರುವುದು ಗಮನಾರ್ಹ. 

ಇದೀಗ ಚಿತ್ರತಂಡ ವಾರಣಾಸಿಯ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದು ಜನವರಿಯಿಂದ ಚಿತ್ರದ ಹಾಡುಗಳ ಭಾಗ ಶೂಟಿಂಗ್ ಪ್ರಾರಂಭಿಸಲಾಗುವುದು ಎಂದು ಮೂಲಗಳು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com