ಕುರುಕ್ಷೇತ್ರ ದರ್ಶನ್ ಸಿನಿಮಾವಲ್ಲ, ಫೈಲ್ವಾನ್ ನನ್ನದಲ್ಲ: ನಟ ಸುದೀಪ್ ಮಾರ್ಮಿಕ ಹೇಳಿಕೆಗೆ ಕಾರಣವೇನು?

: ಕೃಷ್ಣ ನಿರ್ದೇಶನದ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಸಿನಿಮಾವೂ ಚಿತ್ರೀಕರಣವೂ ಕಂಪ್ಲೀಟ್‌ ಆಗಿದ್ದೂ, ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ಚಿತ್ರತಂಡವೂ ...

Published: 06th July 2019 12:00 PM  |   Last Updated: 06th July 2019 11:47 AM   |  A+A-


Darshan And Sudeep

ದರ್ಶನ್ ಮತ್ತು ಸುದೀಪ್

Posted By : SD SD
Source : Online Desk
ಬೆಂಗಳೂರು: ಕೃಷ್ಣ ನಿರ್ದೇಶನದ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಸಿನಿಮಾವೂ ಚಿತ್ರೀಕರಣವೂ ಕಂಪ್ಲೀಟ್‌ ಆಗಿದ್ದೂ, ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ಚಿತ್ರತಂಡವೂ ಸಿದ್ಧತೆಯನ್ನು ಮಾಡಿಕೊಂಡಿದೆ. ಅದೇ ರೀತಿ ದರ್ಶನ್‌ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣವೂ ಕಂಪ್ಲೀಟ್‌ ಆಗಿದೆ. 

ಈ ನಡುವೆ ಕಿಚ್ಚ ಸುದೀಪ್  ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುರುಕ್ಷೇತ್ರ ದರ್ಶನ್ ಸಿನಿಮಾವಲ್ಲ, ಫೈಲ್ವಾನ್ ನನ್ನ ಸಿನಿಮಾವಲ್ಲ, ಅದು ನಿರ್ಮಾಪಕರದ್ದಾಗಿದೆ ಎಂದು ಸುದೀಪ್ ಹೇಳಿದ್ದಾರೆ,.

ಇನ್ನೂ ಸುದೀಪ್ ಮನೆಯಲ್ಲಿ ದರ್ಶನ್ ಮತ್ತು ಕಿಚ್ಚ ಒಟ್ಟಿಗೆ ಇರುವ ಫೋಟೋವನ್ನು ಹಾಕಿಕೊಂಡಿದ್ದಾರೆ., ಇದರ ಬಗ್ಗೆಯೂ ಮಾತನಾಡಿರುವ ಸುದೀಪ್, ನಾನು ಯಾರಿಗಾದರೂ ಜೀವನದಲ್ಲಿ ಒಂದು ಸ್ಥಾನ ಕೊಟ್ಟಾಗ ನನಗೆ ಅಷ್ಟು ಬೇಗ ತೆಗೆದುಹಾಕಲು ಬರಲ್ಲ ಎಂದು ತಿಳಿಸಿದ್ದಾರೆ.

ಸ್ಟಾರ್ ಡಂ ತೆಗೆದು ಪಕ್ಕಕ್ಕಿಟ್ಟರೇ ಸ್ನೇಹ ಮುಂದುವರೆಯುತ್ತದೆ ಎಂದು ಸುದೀಪ್, ಇನ್ ಡೈರೆಕ್ಟ್ ಆಗಿ ತಿಳಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp