ದೇವಕಿ ಚಿತ್ರಕ್ಕೆ ಬಂದ 'ಸಾಹೋ' ಚಿತ್ರದ ಸೌಂಡ್ ಇಂಜಿನಿಯರ್!

ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

Published: 25th June 2019 12:00 PM  |   Last Updated: 25th June 2019 11:37 AM   |  A+A-


Priyanka Upendra

ಪ್ರಿಯಾಂಕಾ ಉಪೇಂದ್ರ

Posted By : VS VS
Source : The New Indian Express
ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

ಉದಯ್ ಕುಮಾರ್ ತಮಿಳಿನ ಕಬಾಲಿ, ವಿಸಾರಣೈ, ವಡ ಚೆನ್ನೈ ಮತ್ತು ವಿಶ್ವಾಸಂ ಚಿತ್ರಗಳಿಗೆ ಸೌಂಡ್ ಮಿಕ್ಸಿಂಗ್ ಕೆಲಸ ಮಾಡಿದ್ದು ಇದೀಗ ದೇವಕಿ ಚಿತ್ರಕ್ಕೂ ಸೌಂಡ್-ಮಿಕ್ಸಿಂಗ್ ಮಾಡಲಿದ್ದಾರೆ.

ದೇವಕಿ ಚಿತ್ರವನ್ನು ಲೋಹಿತ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರವೀಶ್ ಮತ್ತು ಅಕ್ಷಯ್ ಬಂಡವಾಳ ಹೂಡಿದ್ದು ಪ್ರಿಯಾಂಕಾ ಉಪೇಂದ್ರ ಪುತ್ರಿ ಐಶ್ವರ್ಯ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

ಜುಲೈ 5ರಂದು ಚಿತ್ರ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ. ಚಿತ್ರಕ್ಕೆ ಎಚ್ ಸಿ ವೇಣುರ ಛಾಯಾಗ್ರಹಣವಿದೆ. ನಬೀನ್ ಪೌಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp