
ರಾಜವರ್ಧನ್
Source : The New Indian Express
ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿದ್ದು ಇದೀಗ ಕನ್ನಡದ ಬಿಚ್ಚುಗತ್ತಿ ಚಾಪ್ಟರ್ 1 ಹಿಂದಿ ಡಬ್ಬಿಂಗ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ.
ಹರಿ ಸಂತೋಷ್ ನಿರ್ದೇಶನದ ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದಲ್ಲಿ ರಾಜವರ್ಧನ್ ಅಭಿನಯಿಸಿದ್ದಾರೆ. ಇನ್ನು ಕೊನೆಯ ಹಂತದ ಚಿತ್ರೀಕರಣ ಬಾಕಿ ಇರುವಾಗಲೇ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಗೆ ಭಾರೀ ಬೇಡಿಕೆ ಬಂದಿತ್ತು. ಚಿತ್ರತಂಡ ಚಿತ್ರೀಕರಣದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.
ತೆಲುಗು ಮತ್ತು ತಮಿಳಿನಲ್ಲೂ ಚಿತ್ರ ಡಬ್ ಆಗುತ್ತಿದೆ. ಕನ್ನಡದ ಜೊತೆಗೆ ಹಿಂದಿ ಮತ್ತು ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆಗೆ ನಿರ್ದೇಶಕರು ತೀರ್ಮಾನಿಸಿದ್ದಾರೆ. ಚಿತ್ರದಲ್ಲಿ ನಟಿ ಹರಿಪ್ರಿಯಾ ಸಹ ನಟಿಸಿದ್ದಾರೆ.
ಖ್ಯಾತ ಕಾದಂಬರಿಕಾರ ಬಿಎಲ್ ವೇಣು ಅವರ ಬಿಚ್ಚುಗತ್ತಿ ಕಾದಂಬರಿ ಆಧಾರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
Stay up to date on all the latest ಸಿನಿಮಾ ಸುದ್ದಿ news