ಪ್ರೇಕ್ಷಕರ ನಾಡಿಮಿಡಿತ ಅರ್ಥೈಸಿಕೊಳ್ಳುವ ಮಟ್ಟಿಗೆ ನಾನು ಡಾಕ್ಟರ್ ಆಗಿರುವೆ: ರವಿಚಂದ್ರನ್

ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ನೇರ ಮಾತು ಮತ್ತು ಪ್ರಾಮಾಣಿಕ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದಾರೆ. ಚಲನಚಿತ್ರ ನಿರ್ಮಾಪಕ ಅಥವಾ ನಟನಾಗಿ  ಅವರೆಂದಿಗೂ ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿದ್ದಾರೆ.
ರವಿಚಂದ್ರನ್
ರವಿಚಂದ್ರನ್

ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ನೇರ ಮಾತು ಮತ್ತು ಪ್ರಾಮಾಣಿಕ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದಾರೆ. ಚಲನಚಿತ್ರ ನಿರ್ಮಾಪಕ ಅಥವಾ ನಟನಾಗಿ  ಅವರೆಂದಿಗೂ ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿದ್ದಾರೆ. ಇಂತಹಾ ಮೇರು ನಟನಿಗೆ  ನವೆಂಬರ್ 4 ರಂದು ಸಿಎಮ್ಆರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತು ಅವರು ತಮಗೆ ದೊರೆತ ಈ ಗೌರವವನ್ನು ಪ್ರಾಮಾಣಿಕತೆಯಿಂದಲೇ ಒಪ್ಪಿಕೊಂಡಿದ್ದಾರೆ.

“ಪ್ರೇಕ್ಷಕರ ನಾಡಿಮಿಡಿತವನ್ನು ಮೊದಲಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗೆ ನಾನು ಡಾಕ್ಟರ್ ಆಗಿದ್ದೇನೆ, ಈ ಗೌರವವು ಸಕಾರಾತ್ಮಕ ಚಿತ್ರಗಳನ್ನು ಮಾದುವತ್ತ ನನ್ನನ್ನು ಪ್ರೇರೇಪಿಸುತ್ತದೆ." ಅವರು ಹೇಳಿದ್ದಾರೆ.

ಕೆ ಮಂಜು ನಿರ್ಮಿಸುತ್ತಿರುವ ಅವರ ಮುಂಬರುವ ಚಿತ್ರ "ಆ ದೃಶ್ಯ" ಇದೇ ನವೆಂಬರ್ 8ಕ್ಕೆ ತೆರೆ ಕಾಣಲಿದೆ.ಕೊಲೆ ರಹಸ್ಯ ಬೇಧಿಸುವ ಕಥಾಹಂದರವಿರುವ ಚಿತ್ರಕ್ಕೆ ಶಿವಗಣೇಶ್ ಆಕ್ಷನ್ ಕಟ್ ಹೇಳಿದ್ದಾರೆ. ರವೊಚಂದ್ರನ್ ಈ ಚಿತ್ರದಲ್ಲಿ ಕ್ಯಾಮರಾ ಮುಂದೆ ನಟಿಸುವುದಕ್ಕಷ್ಟೇ ತಮ್ಮನ್ನು ತಾವು ನಿರ್ಬಂಧಿಸಿಕೊಂಡಿದ್ದಾರೆ.

"ಆ ದೃಶ್ಯ" ಚಿತ್ರದಲ್ಲಿ ಕ್ರೇಜಿ ಸ್ಟಾರ್ ತಾವು ಯುವಕನ ಪಾತ್ರದಲ್ಲಿ ಸಹ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್."ಜನರು ಯಾವಾಗಲೂ ತಮ್ಮ ನೆಚ್ಚಿನ ನಟರನ್ನು ಯುವಕನನ್ನಾಗಿ ನೋಡಲು  ಬಯಸುತ್ತಾರೆ, ಆದ್ದರಿಂದ ಚಲನಚಿತ್ರ ನಿರ್ಮಾಪಕರು ಒಂದು ಪಾತ್ರಕ್ಕಾಗಿ ಕೆಲವು ಹೊಸ ಗೆಟಪ್ ಹಾಗೂ ಶಾಡೋಗಳನ್ನು ತರಲು ಯತ್ನಿಸಿದ್ದಾರೆ. ಈ ಪ್ರಯತ್ನದ ಯೋಗ್ಯತೆ ಚಿತ್ರ ಒಮ್ಮೆ ತೆರೆಗೆ ಬಂದಾಗ ತಿಳಿಯಲಿದೆ.ಕೆಲವು ಚಲನಚಿತ್ರ ನಿರ್ಮಾಪಕರು ನಾನು ಯುವಕನಂತೆ ಕಾಣಬೇಕೆಂದು ಬಯಸಿದ್ದರೆ ನಾನು  60 ವಷದವನಂತೆ ಕಾಣಬಯಸುವ ನಿರ್ದೇಶಕರೂ ಇದ್ದಾರೆ.ಈ ವಿಭಿನ್ನ ಗೆಟ್‌ಅಪ್‌ಗಳ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ಪ್ರೇಕ್ಷಕರು ನನ್ನ ನೈಜ ವಯಸ್ಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ನಾನೆಂದಿಗೂ ಕ್ರೇಜಿ ಸ್ಟಾರ್ ಅಷ್ಟೇ"

ಸ್ವತಃ ಚಿತ್ರ ನಿರ್ಮಾಪಕನಾಗಿರುವುದರಿಂದ, ಬೇರೊಬ್ಬರು ನಿರ್ದೇಶಿಸಿದ ಚಲನಚಿತ್ರದಲ್ಲಿ ರವಿಚಂದ್ರನ್ ನಟಿಸುವುದಕ್ಕೆ ಯಾವ ವ್ಯತ್ಯಾಸವಿದೆಯೆ ಎಂದು ಕೇಳಿದಾಗ " ನಾನು ನಟಿಸಿಸುವಾಗ ನಿರ್ದೇಶಕರ ದೃಷ್ಟಿಯನ್ನಷ್ಟೇ ಗಮನಿಸುತ್ತೇನೆ. ಅಲ್ಲಿ ನನಗೆ ಬೇರೆ ಏನೂ ಮುಖ್ಯವಾಗುವುದಿಲ್ಲ. ನಾನು ನಟಿಸುವ ಚಿತ್ರದ ನಿರ್ದೇಶಕರು ನನ್ನನ್ನು ರವಿಚಂದ್ರನ್ ಆಗಿ ಕಾಣಬೇಕು. ಮತ್ತು ಅದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ದೃಷ್ಟಿ ಮತ್ತು ಅನುಭವವು ಇಂದಿನ ನಿರ್ದೇಶಕರಿಗೆ ಅರ್ಥಮಾಡಿಕೊಳ್ಳಲು ತುಂಬಾ ಆಳ ಹಾಗೂ ವಿಸ್ತಾರವಾಗಿದೆ. ನನ್ನ ಆಲೋಚನೆಗಳನ್ನು ಅವರಲ್ಲಿ ಮೂಡಿಸಲು ಪ್ರಯತ್ನಿಸುವುದಕ್ಕಿಂತ ಯುವಕರ ಮಾತನ್ನು ಕೇಳುವುದು,ಅವರ ದೃಷ್ಟಿಯನ್ನು ಅನುಸರಿಸುವುದು ಉತ್ತಮ. ಹೇಗಾದರೂ, ನಾನು ನನ್ನ ಚಲನಚಿತ್ರಗಳನ್ನು ನಿರ್ದೇಶಿಸಿದಾಗ ಮತ್ತು ನಟಿಸುವಾಗ ಇದು ವಿಭಿನ್ನ ಸನ್ನಿವೇಶವಾಗಿರುತ್ತದೆ. ನಿರ್ದೇಶಕನಾಗಿದ್ದಾಗ ಇಡೀ ಪ್ರಾಡಕ್ಟ್ ನನ್ನದೇ ಆಗಿರುತ್ತದೆ. 

"ನಾನು ಇಂದಿನ ಪ್ರೇಕ್ಷಕರನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅವರ ಮನಸ್ಸಿನಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತೇನೆ. ರವಿಚಂದ್ರನ್ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ವಿಶೇಷವಾಗಿ ಚಲನಚಿತ್ರಗಳ ಪ್ರಯೋಗಕ್ಕೆ ಬಂದಾಗ. ಒಮ್ಮೆ, ನಾನು ಚಲನಚಿತ್ರ ನಿರ್ಮಾಪಕನಾಗಿ ನನ್ನ ಅಹಂಕಾರವನ್ನು ದಮನಿಸುವ ಚಿತ್ರವನ್ನೂ ಂಆಡುತ್ತೇನೆ. ಹಾಗಾಗಿ ಪ್ರಾಜೆಕ್ಟ್ ಅನ್ನು ನಿರ್ವಹಿಸುವುದಕ್ಕೂ ಮತ್ತು ಬೇರೊಬ್ಬರು ನನ್ನನ್ನು ನಟನಾಗಿ ನಿಭಾಯಿಸುವುದರ ನಡುವೆ ದೊಡ್ಡ ವ್ಯತ್ಯಾಸವಿದೆ, ”

ನನ್ನಲ್ಲಿನ ನಿರ್ದೇಶಕನಿನ್ನೂ ಜೀವಂತವಾಗಿದ್ದಾನೆ ಎನ್ನುವ ರವಿಚಂದ್ರನ್ “ಪರದೆಯ ಮೇಲೆ ನನ್ನ ದೃಷ್ಟಿ ಇದ್ದಾಗ ನಾನದನ್ನು ಸರಿಯಾಗಿ ಪ್ರಸ್ತುತಪಡಿಸುತ್ತೇನೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ನಾನು ಕಮರ್ಷಿಯಲ್ ಅಂಶಗಳತ್ತ ಹೆಚ್ಚು ಡಿವಿಯೇಟ್ ಆಗಿದ್ದೇನೆ. ಜತೆಗೆ ನಾನು ಕಲಾತ್ಮಕ ಅಂಅಗಳನ್ನು ನೊಡುತ್ತೇನೆ. ನನಗೆ ಒಂದೆರಡು ಕಾರಣಗಳಿದೆ, ಪ್ರಯೋಗಾತ್ಮಕ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಪ್ರೇಕ್ಷಕರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ನಾನು ಅರಿತುಕೊಂಡಿದ್ದೇನೆ. ಎರಡನೆಯದಾಗಿ, ಈ ಹಿಂದೆ ನಾವು ಪ್ರೇಕ್ಷಕರಿಗಾಗಿ ಚಲನಚಿತ್ರಗಳನ್ನು ತಯಾರಿಸುತ್ತಿದ್ದೆವು, ಆದರೆ ಇಂದು ನಾವು ಅವುಗಳನ್ನು ವಿಮರ್ಶಕರಿಗಾಗಿ ಮಾಡುತ್ತಿದ್ದೇವೆ ಪ್ರತಿಯೊಬ್ಬ ಸಿನಿ ಪ್ರೇಕ್ಷಕನೂ ಇಂದು ವಿಮರ್ಶಕನಾಗಿದ್ದಾನೆ. ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಅನ್ನು ಬೆರಳ ತುದಿಯಲ್ಲಿ ಇಟ್ಟುಕೊಳ್ಳುವ ಕಾರಣ ಚಿತ್ರ ಪೂರ್ನವಾಗುವ ಮುನ್ನವೇ ವಿಮರ್ಶೆ ಬರುತ್ತದೆ. ಅವರು ನೀಡಿದ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚುರವಾಗುತ್ತದೆ.  ಅವರು ಚಲನಚಿತ್ರವನ್ನು ಗೇಲಿ ಮಾಡುತ್ತಾರೆ, ಮೇಮ್‌ಗಳನ್ನು ರಚಿಸುತ್ತಾರೆ ಮತ್ತು ಆಗಾಗ್ಗೆ ಹೋಲಿಕೆಗಳನ್ನು ಸಹ ಮಾಡುತ್ತಾರೆ. "

ನಟ, ನಿರ್ದೇಶಕ ರವಿಚಂದ್ರನ್ ತಮ್ಮ ಬಿಡುವಿಲ್ಲದ ಶೆಡ್ಯೂಲ್ ನಡುವೆಯೂ ತಾವು "ರವಿ ಬೋಪಣ್ಣ"ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ "ರಾಜೇಂದ್ರ ಪೊನ್ನಪ್ಪ" ಚಿತ್ರದ ಕೆಲಸದಲ್ಲಿ ತೊಡಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com