ಶಿವರಾಜ್ ಕುಮಾರ್ ಕನ್ನಡ ಸಿನಿಮಾದ ಶಾರೂಖ್ ಖಾನ್ - ಪಿ ವಾಸು

ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್  ಅಭಿಯನದ, ಪಿ. ವಾಸು ನಿರ್ದೇಶನದ  ಆಯುಷ್ಮಾನ್ ಭವ ಚಿತ್ರ ನವೆಂಬರ್ 15 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದ್ದು, ಕನ್ನಡ ಚಿತ್ರ ರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಶಿವರಾಜ್ ಕುಮಾರ್, ರಚಿತಾ ರಾಮ್
ಶಿವರಾಜ್ ಕುಮಾರ್, ರಚಿತಾ ರಾಮ್

ಹ್ಯಾಟ್ರಿಕ್  ಹಿರೋ ಡಾ. ಶಿವರಾಜ್ ಕುಮಾರ್  ಅಭಿಯನದ, ಪಿ. ವಾಸು ನಿರ್ದೇಶನದ  ಆಯುಷ್ಮಾನ್ ಭವ ಚಿತ್ರ ನವೆಂಬರ್ 15 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದ್ದು, ಕನ್ನಡ ಚಿತ್ರ ರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

 ಇದು ದ್ವಾರಕೀಶ್ ನಿರ್ಮಾಣದ 52ನೇ ಚಿತ್ರವಾಗಿದ್ದು, ಶಿವಲಿಂಗ ಬಳಿಕ ಶಿವರಾಜ್ ಕುಮಾರ್ ಜೊತೆಗೆ ಎರಡನೇ ಬಾರಿಗೆ ಕೆಲಸ ಮಾಡಿರುವ ಪಿ. ವಾಸು ಶಿವಣ್ಣನನ್ನು ಬಾಲಿವುಡ್ ನ ಶಾರೂಖ್  ಖಾನ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಹೋಲಿಸಿದ್ದಾರೆ.

 ಪಿ. ವಾಸು ಕನ್ನಡ ಸಿನಿಮಾ ಮಾಡಿದಾಗಲೆಲ್ಲಾ ಸಾಕಷ್ಟು ಕುತೂಹಲ ಇದ್ದೇ ಇರುತ್ತದೆ. ಕನ್ನಡದ ವೀಕ್ಷಕರು ಕಲಾವಿದರಿಗಿಂತ  ಹೆಚ್ಚಾಗಿ ಕಥೆಗೆ ಆದ್ಯತೆ ನೀಡುತ್ತಾರೆ. ಸ್ಯಾಂಡಲ್ ವುಡಿನ ಹೊಸ ನಿರ್ದೇಶಕರು ಸಾಕಷ್ಟು ಒಳ್ಳೇಯ ಸಿನಿಮಾ ಮಾಡಿದ್ದಾರೆ. ಅವರು ಯುವ ಕೇಂದ್ರೀತ ಸಿನಿಮಾಗಳತ್ತ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.  ಸಮಕಾಲೀನ ವಿಷಯವನ್ನು ತೆಗೆದುಕೊಂಡಿದ್ದು, ಕುಟುಂಬ, ಹಾಸ್ಯ ಹಾಗೂ ಭಾವನಾತ್ಮಕ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಶಿವಲಿಂಗ ನಂತರ ಅಯುಷ್ಮಾನ್ ಭವ ಜೊತೆಗೆ ಶಿವಣ್ಣ ಜೊತೆಗೆ ಕೆಲಸ ಮಾಡಿದ್ದೇನೆ. ಅವರು ಕರ್ನಾಟಕದ ಶಾರೂಖ್ ಖಾನ್ ಆಗಿದ್ದಾರೆ. ತಮ್ಮ ಪಾತ್ರವನ್ನು ಅರ್ಥ ಮಾಡಿಕೊಂಡು, ನಿರ್ದೇಶಕರಿಗೆ ಏನು ಬೇಕೋ ಹಾಗೆಯೇ ನಟಿಸಿದ್ದಾರೆ. ಶಿವರಾಜ್ ಕುಮಾರ್ ಹೊರತುಪಡಿಸಿದರೆ ಅನಂತ್ ನಾಗ್ ಹಾಗೂ ರಚಿತಾ ರಾಮ್ ಉತ್ತಮವಾಗಿ ನಟಿಸಿದ್ದಾರೆ. ರಚಿತಾ ರಾಮ್ ಅವರಿಗೆ ವೃತ್ತಿರಂಗದಲ್ಲಿ  ಅಯುಷ್ಮಾನ್ ಭವ ಉತ್ತಮ ಹೆಸರು ತಂದುಕೊಡಲಿದೆ ಎಂದು ಭರವಸೆ ಹೊಂದಿರುವುದಾಗಿ ತಿಳಿಸಿದ್ದಾರೆ.

ದ್ವಾರಕೀಶ್ 50 ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿದ್ದು, 50 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 500 ಸಿನಿಮಾಗಳಲ್ಲಿ ನಟಿಸಿದ್ದು, ಬಾಲಚಂದರ್ ಅವರನ್ನು ದ್ವಾರಕೀಶ್ ಅವರಲ್ಲಿ ಕಾಣುತ್ತಿರುವುದಾಗಿ ಹೇಳಿದ ಪಿ. ವಾಸು,  ಆಪ್ತಮಿತ್ರ ನಂತರ ಆಯುಷ್ಮಾನ್ ಭವ ಚಿತ್ರದ ಸಂಗೀತದ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಈ ಚಿತ್ರಕ್ಕೆ ಗುರುಕಿರಣ್ ಅದ್ಬುತ ಸಂಗೀತ ಸಂಯೋಜಿಸಿದ್ದಾರೆಯ ಚಿತ್ರಕಥೆ ವಿಭಿನ್ನವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com