ವೇದಿಕೆಯಲ್ಲಿ ಕಣ್ಸನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್: 'ನಟ ಜಗ್ಗೇಶ್ ಗರಂ!

ಖಾಸಗಿ ಕಾಲೇಜ್ ವೊಂದರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿ ಹಿಂಸೆ ಅನುಭವಿಸಿದ್ದಾಗಿ ನವ ರಸ ನಾಯಕ ಜಗ್ಗೇಶ್ ಫೇಸ್ ಬುಕ್ ಫೇಜ್ ನಲ್ಲಿ ಬರೆದುಕೊಂಡಿದ್ದಾರೆ. 
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಖಾಸಗಿ ಕಾಲೇಜ್ ವೊಂದರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿ ಹಿಂಸೆ ಅನುಭವಿಸಿದ್ದಾಗಿ ನವರಸ ನಾಯಕ ಜಗ್ಗೇಶ್ ಫೇಸ್ ಬುಕ್ ಫೇಜ್ ನಲ್ಲಿ ಬರೆದುಕೊಂಡಿದ್ದಾರೆ. 

ಕಣ್ಣು ಹೊಡೆದು ರಾತ್ರೋ ರಾತ್ರಿ ಸ್ಟಾರ್ ಆದ ಕೇರಳದ  ಪ್ರಿಯಾ ಪ್ರಕಾಶ್ ವಾರಿಯರ್ ಜೊತೆಗೆ ವೇದಿಕೆ ಹಂಚಿಕೊಂಡ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ರಾಜ್ಯ, ರಾಷ್ಟ್ರಕ್ಕೆ ಕೊಡುಗೆ ಏನು ಇಲ್ಲಾ, ಬರಹಗಾರ್ತಿಯಲ್ಲ, ಸ್ವಾತಂತ್ರ್ಯ ಹೋರಾಟಗಾರ್ತಿಯಂತು ಅಲ್ಲವೇ ಅಲ್ಲಾ, ಹೋಗಲಿ ನೂರು ಸಿನಿಮಾಗಳ ನಟಿಯಂತು ಅಲ್ಲಾ, ಸಾಹಿತಿ, ಅಲ್ಲಾ, ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ, ಆಧುನಿಕ ಮದರ್ ತೆರೆಸಾ ಅಲ್ಲ, ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವಿಡಿಯೋ ಮಾಡಿ ಜಗಮೆಚ್ಚಿದ ಸಾಮಾನ್ಯ ಹೆಣ್ಣು ಮಗು ಜೊತೆಗೆ ವೇದಿಕೆ ಹಂಚಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶ, ಸಂಸ್ಕೃತಿ , ತಂದೆ ತಾಯಿ ಭಾವನೆ ಉಳಿಸುವ ಯುವ ಸಮುದಾಯವೇ ಎಂದು ಅವರು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com