ಭಾರತೀಯ ಸಂಸ್ಕೃತಿ, ಹಿಂದು ಧರ್ಮದ ಬಗ್ಗೆ ಪ್ರಿಯಾಂಕಾ ಸಾಕಷ್ಟು ಹೇಳಿಕೊಟ್ಟಿದ್ದಾರೆ: ನಿಕ್ ಜೋನಾಸ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಹಿಂದು ಧರ್ಮದ ವಿವಾಹಿತ ಸ್ತ್ರೀಯರು ಆಚರಿಸುವ ಹಬ್ಬ 'ಕರ್ವಾ ಚೌತ್' ಆಚರಿಸಿದ್ದಾರೆ. 

Published: 18th October 2019 01:13 PM  |   Last Updated: 18th October 2019 01:28 PM   |  A+A-


priyanka and nick

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್

Posted By : Manjula VN
Source : ANI

ನವದೆಹಲಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಹಿಂದು ಧರ್ಮದ ವಿವಾಹಿತ ಸ್ತ್ರೀಯರು ಆಚರಿಸುವ ಹಬ್ಬ 'ಕರ್ವಾ ಚೌತ್' ಆಚರಿಸಿದ್ದಾರೆ. 

ಕರ್ವಾ ಚೌತ್ ಹಬ್ಬ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಇನ್ಸ್'ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ನಿಕ್ ಜೋನಸ್, ಪತ್ನಿ ಪ್ರಿಯಾಂಕಾ ಅವರನ್ನು ಕೊಂಡಾಡಿದ್ದಾರೆ. 

ಪ್ರಿಯಾಂಕಾ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡಿರುವ ನಿಕ್, ನನ್ನ ಪತ್ನಿ ಭಾರತೀಯಳು. ಆಕೆ ಹಿಂದು. ಪ್ರತೀ ಹಂತದಲ್ಲಿ ಆಕೆ ಅಭೂತಪೂರ್ವ. ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಬಗ್ಗೆ ಆಕೆ ಸಾಕಷ್ಟು ಹೇಳಿಕೊಟ್ಟಿದ್ದಾಳೆ. ಆಕೆಯನ್ನು ಬಹಳ ಪ್ರೀತಿಸುತ್ತೇನೆ, ಇಷ್ಟಪಡುತ್ತೇನೆ. ನಮ್ಮಿಬ್ಬರ ಒಡನಾಟವನ್ನು ಫೋಟೋದಲ್ಲಿಯೇ ನೋಡಬಹುದು. ಎಲ್ಲರಿಗೂ ಕರ್ವಾ ಚೌತ್ ಶುಭಾಶಯಗಳು ಎಂದು ಹೇಳಿದ್ದಾರೆ. 

 

ಇದರಂತೆ ಪ್ರಿಯಾಂಕಾ ಕೂಡ ಇನ್ಸ್'ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಜೋನಸ್ ಸಹೋದರನ ಸಂಗೀತ ಕಾರ್ಯಕ್ರಮದಲ್ಲಿ ಕರ್ವಾ ಚೌತ್ ಆಚರಣೆ. ವೈವಾಹಿಕ ಜೀವನದ ಬಳಿಕ ಇದು ಮೊದಲ ಹಬ್ಬ. ಸದಾ ಕಾಲ ನೆನಪಿನಲ್ಲಿರುತ್ತದೆ ಎಂದು ಹೇಳಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp