ಬುದ್ಧಿವಂತನ ನೊಂದಿಗೆ ಭಿನ್ನಾಭಿಪ್ರಾಯ: 'ಬುದ್ಧಿವಂತ 2' ನಿರ್ದೇಶನದಿಂದ ಮೌರ್ಯ ಹೊರಕ್ಕೆ!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ 2 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿದ್ದ ನವ ನಿರ್ದೇಶಕ ಮೌರ್ಯ ಚಿತ್ರದಿಂದ ಹೊರಬಂದಿದ್ದಾರೆ.

Published: 09th September 2019 12:01 PM  |   Last Updated: 09th September 2019 03:49 PM   |  A+A-


Upendra

ಉಪೇಂದ್ರ

Posted By : Vishwanath S
Source : The New Indian Express

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ 2 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿದ್ದ ನವ ನಿರ್ದೇಶಕ ಮೌರ್ಯ ಚಿತ್ರದಿಂದ ಹೊರಬಂದಿದ್ದಾರೆ. 

20 ದಿನಗಳ ಹಿಂದಷ್ಟೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿತ್ತು. ಇದೀಗ ನಿರ್ದೇಶಕರು ಚಿತ್ರದಿಂದ ಹೊರಬಂದಿದ್ದಾರೆ. ನಟ ಉಪೇಂದ್ರ ಮತ್ತು ನಿರ್ದೇಶಕ ನಡುವೆ ಸೃಜನಶೀಲ ವ್ಯತ್ಯಾಸಗಳಿಂದ ನಿರ್ದೇಶಕರು ನಿರ್ದೇಶನದಿಂದ ಹೊರ ಬಂದಿದ್ದಾರೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಪ್ರೊಡೆಕ್ಷನ್ ಹೌಸ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇದೀಗ ಚಿತ್ರದ ನಿರ್ದೇಶನಕ್ಕೆ ನವ ನಿರ್ದೇಶಕ ಜಯರಾಮ್ ಮುಂದಾಗಿದ್ದಾರೆ. ಜಯರಾಮ್ ಅವರು ಐ ಲವ್ ಯೂ ಚಿತ್ರದಲ್ಲಿ ಆರ್ ಚಂದ್ರು ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 

ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ನಟ ಉಪೇಂದ್ರ ಅವರು ಇಂದು ನಿರ್ದೇಶಕರು ಹೊಸ ಆಲೋಚನೆಗಳು ಮತ್ತು ಹೊಸ ದೃಷ್ಟಿಯೊಂದಿಗೆ ನಿರ್ದೇಶನಕ್ಕೆ ಬರುತ್ತಿದ್ದಾರೆ. ಅದೇ ರೀತಿ ನವ ನಿರ್ದೇಶಕ ಮೌರ್ಯ ಸಹ ಒಬ್ಬರು ಎಂದು ಗುಣಗಾನ ಮಾಡಿದ್ದರು. ಆದರೆ ಇದೀಗ ನಿರ್ದೇಶನದಿಂದ ಮೌರ್ಯ ಹೊರಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp