ಪೈಲ್ವಾನ್ ಗಾಗಿ 'ಎ ಫಾರ್ ಆಪಲ್' ನಿಂದ ತಾಲೀಮು ನಡೆಸಿದ್ದೆ: ಕಿಚ್ಚ ಸುದೀಪ್

ಜೀವನದಲ್ಲಿ ಎಂದೂ ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳದ ಯಾವ ಅಜೆಂಡಾಗಳನ್ನಿರಿಸಿಕೊಳ್ಲದ ನಟ ಸುದೀಪ್. ಆದರೆ ಇಂದು ಬಿಡುಗಡೆಯಾಗಿರುವ ಎಸ್.ಕೃಷ್ಣ ನಿರ್ದೇಶನದ "ಪೈಲ್ವಾನ್ "ನಲ್ಲಿ ಅವರು ಅಭಿನಯಿಸಿದ ರೀತಿ ತೆರೆ ಮೇಲಿನ ಕುಸ್ತಿಪಟುವಾದ ಬಗೆ ನೋಡಿದ ನಂತರ ಅವರು ಶರ್ಟ್ ಇಲ್ಲದೆಯೂ ತಮ್ಮ ದೇಹದಾರ್ಡ್ಯವನ್ನು ಪ್ರದರ್ಶಿಸುವ ಧೈರ್ಯ ತಾಳುವಂತಾಗಿದೆ.

Published: 12th September 2019 11:09 AM  |   Last Updated: 12th September 2019 11:47 AM   |  A+A-


ಪೈಲ್ವಾನ್ ಚಿತ್ರದಲ್ಲಿ ಸುದೀಪ್

Posted By : Raghavendra Adiga
Source : The New Indian Express

ಜೀವನದಲ್ಲಿ ಎಂದೂ ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳದ ಯಾವ ಅಜೆಂಡಾಗಳನ್ನಿರಿಸಿಕೊಳ್ಲದ ನಟ ಸುದೀಪ್. ಆದರೆ ಇಂದು ಬಿಡುಗಡೆಯಾಗಿರುವ ಎಸ್.ಕೃಷ್ಣ ನಿರ್ದೇಶನದ "ಪೈಲ್ವಾನ್" ನಲ್ಲಿ ಅವರು ಅಭಿನಯಿಸಿದ ರೀತಿ ತೆರೆ ಮೇಲಿನ ಕುಸ್ತಿಪಟುವಾದ ಬಗೆ ನೋಡಿದ ನಂತರ ಅವರು ಶರ್ಟ್ ಇಲ್ಲದೆಯೂ ತಮ್ಮ ದೇಹದಾರ್ಡ್ಯವನ್ನು ಪ್ರದರ್ಶಿಸುವ ಧೈರ್ಯ ತಾಳುವಂತಾಗಿದೆ.

ಚೊತ್ರ್ದ ಪ್ರಾರಂಭದಿಂಡ ಸಾಕಷ್ಟು ಹೈಪ್ ಗಳು ಸೃಷ್ಟಿಯಾಗಿತ್ತು. ಆದರೆ ಇಂತಹದೊಂದು ಪಾತ್ರ ನನ್ನ ಪಾಲಿಗೆ ಬರಲಿದೆ ಎಂದು ಸ್ವತಃ ತಾನೆಂದುಕೊಂಡಿರಲಿಲ್ಲ ಎಂಬುದಾಗಿ  ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ.ಈ ಚಿತ್ರ ಫಿಟ್ನೆಸ್ ಕುರಿತ ಅವರ ಗ್ರಹಿಕೆಯನ್ನು ಬದಲಿಸಿದೆಯಂತೆ. . “ಇಂದು, ಹಿಂದಿ ಚಿತ್ರ ದಬಾಂಗ್ 3 ಗಾಗಿ ಶರ್ಟ್ ಇಲ್ಲದೆ ಅಭಿನಯಿಸಲು ನನಗೆ ವಿಶ್ವಾಸ ಬಂದಿದೆ.ಅದರಲ್ಲೂ ವಿಶೇಷವಾಗಿ ಸಲ್ಮಾನ್ ಖಾನ್ ಅವರಂತಹ ನಟನ ಮುಂದೆ ನಾನು ಅಭಿನಯಿಸುವುದು ವಿಶೇಷ. ಅವರು ಇದನ್ನು ವರ್ಷಗಳ ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ.ನಾನು ಈ ಅಭ್ಯಾಸವನ್ನು ಕನ್ನಡ ಚಿತ್ರರಂಗದಿಂದ ಪ್ರಾರಂಭಿಸಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಕುಟುಂಬ ಕೂಡ ನಾನು ಇದನ್ನು ಮಾಡುವೆನೆಂದು ಭಾವಿಸಿರಲಿಲ್ಲ. ಇದೀಗ ಅವರುಗಳು ನನಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪೈಲ್ವಾನ್ ಪಾತ್ರದ ಬಗ್ಗೆ ನನ್ನ ಜನರಿಂದ ಯಾವ ಬಗೆಯ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ನಾನು ಕಾತುರದಿಂಡ ಕಾಯುತ್ತಿದ್ದೇನೆ"

ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರಕ್ಕಾಗಿ ತಯಾರಿ ನಡೆಸಬೇಕಿದ್ದ ಸುದೀಪ್, ಯಾವುದೇ ತಜ್ಞರಿಂದ ಅಥವಾ ಅಂತಹ ಪಾತ್ರಗಳನ್ನು ನಿರ್ವಹಿಸಿದ ನಟರಿಂದ ಸ್ಪೂರ್ತಿ ಪಡೆದುಕೊಂಡದ್ದಲ್ಲ. “ಮೊದಲನೆಯದಾಗಿ, ನಿರ್ದೇಶಕ ಕೃಷ್ಣ ನನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದಾಗ ನನಗೆ ಅಚ್ಚರಿಯಾಗಿತ್ತು. ಕುಸ್ತಿಪಟು ಅಥವಾ ಬಾಕ್ಸರ್ ಪಾತ್ರವನ್ನು ಮನಸ್ಸಲ್ಲಿಟ್ಟುಕೊಂಡು ಅವರು ಬೇರೆ ಪಾತ್ರಕ್ಕೆ ನಟ ನಟಿಯರನ್ನು ಆಯ್ಕೆ ಮಾಡುವಾಗ ಸಹ ನನಗೆ ಅವ್ರ ಪಾತ್ರಗಳ ಆಯ್ಕೆ ಬಗೆಗೆ ಯಾವ ಕಲ್ಪನೆ ಇರಲಿಲ್ಲ. ಈ ಚಿತ್ರಕ್ಕಾಗಿ ನಾನು ‘ಎ ಫಾರ್ ಆಪಲ್, ಬಿ ಫಾರ್ ಬ್ಯಾಟ್’  ನಿಂದ ತಯಾರಿ ಪ್ರಾರಂಭಿಸಿದ್ದೆ"

ಪಾತ್ರಕ್ಕಾಗಿ ತಯಾರಿ ಮಾಡಲು, ಅವರು ಯೂಟ್ಯೂಬ್‌ನಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಪಂದ್ಯಗಳನ್ನು  ಮತ್ತು ಮುಹಮ್ಮದ್ ಅಲಿಯ ವೀಡಿಯೊಗಳನ್ನು ಮತ್ತು ಬಹಳಷ್ಟು ಬಾಕ್ಸರ್ ಆಧಾರಿತ ಚಲನಚಿತ್ರಗಳನ್ನು ವೀಕ್ಷಿಸಿದರು. "ಈ ಕ್ರೀಡೆಯು ಕೇವಲ ಮೂರು-ನಾಲ್ಕು ವಾರಗಳ ಅಂತರದ ತರಬೇತಿಯ ಬಳಿಕ ಸಿದ್ದಿಸುವುದಲ್ಲ. ಕೆಲ ಪಟ್ಟುಗಳನ್ನು ಅಖಾಡದಲ್ಲೇ ಕಲಿಯಬೇಕಾಗುವುದು" ಇನ್ನೂ ಆರು ತಿಂಗಳ ಸಮಯಾವಕಾಶವಿದ್ದರೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿತ್ತು ಎಂದು ಸ್ಯಾಂಡಲ್ ವುಡ್ ನಟ ಹೇಳಿದ್ದಾರೆ.

ಆರ್‌ಆರ್‌ಆರ್ ಮೋಷನ್ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ತಯಾರಿಸಲಾದ ಪೈಲ್ವಾನ್ ಗುರುವಾರ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಚಿತ್ರದ ಹಿಂದಿ ಅವತರಣಿಕೆ ಶುಕ್ರವಾರ ಭಾರತದಲ್ಲಿ ತೆರೆಗೆ ಬರಲಿದೆ.

“ಪ್ರಸ್ತುತ ಸನ್ನಿವೇಶದಲ್ಲಿ, ಸಿನೆಮಾ ವಿಷಯಕ್ಕೆ ಬಂದರೆ, ರಾಷ್ಟ್ರೀಯ ಭಾಷೆ ಎಂಬುದೇನೂ ಮುಖ್ಯವಾಗುವುದಿಲ್ಲ.ಪ್ರತಿಯೊಂದು ಭಾಷೆಯೂ ಸಮಾನವಾಗಿರುವ ಪ್ರೇಕ್ಷಕವರ್ಗ ಹೊಂದಿದೆ.ನಾನು ಕ್ರಿಕೆಟ್ ಮೈದಾನದಲ್ಲಿ ಇತರ ಪ್ರದೇಶಗಳ ನಟರನ್ನು ಭೇಟಿ ಮಾಡಿದ್ದೇನೆ. ವಿವಿಧ ಪ್ರದೇಶಗಳಲ್ಲಿನ ನಟರ ಲ್ಲಿನ ಬಳಕೆಯು ನನ್ನಲ್ಲಿ ಹೊಸ ಆಲೋಚನೆಗಳ ಹುಟ್ಟಿಗೆ ಕಾರಣವಾಗಿದೆ.ಹಾಗೆಯೇ ನಾನು ಕೂಡ ಅವರೊಂದಿಗೆ ಅದೇ ವೇದಿಕೆಯಲ್ಲಿ ನಿಂತಿರುವುದಕ್ಕೆ ಸಂತಸವಿದೆ." ಅವರು ಹೇಳಿದ್ದಾರೆ.

“ಭಾರತದಾದ್ಯಂತ ವಿವಿಧ ಭಾಷೆಗಳಲ್ಲಿ ಚಿತ್ರ ತಯಾರಿಸಲು ಸರಿಯಾದ ಕಾರಣವಿರಬೇಕು. ಹಾಗೆಯೇ ಅದಕ್ಕೆ ಸಹ ಅದರದೇ ಪ್ರಚಾರದ ಅಗತ್ಯವಿದೆ.ಅದಕ್ಕಾಗಿ ಮಾಡುವ ಹಣ ವಿನಿಯೋಗವು ಒಂದು ಸಾಮಾನ್ಯ ಕನ್ನಡ ಚಿತ್ರ ಮಾಡಲು ಸಾಕಾಗಬಲ್ಲದು. ವೈಯಕ್ತಿಕವಾಗಿ, ನನ್ನ ಸಮಯಕ್ಕೆ ನಾನು ಧನ್ಯವಾದ ಹೇಳಬೇಕು. 2008 ರಲ್ಲಿ ನಾನು ಕೆಲವು ಭಾಷೆಗಳಲ್ಲಿ ಗುರುತಿಸಿಕೊಂಡದ್ದು ನನಗಿಂದು ಸಹಾಯಕ್ಕೆ ಒದಗಿದೆ." 

ಈಗಾಗಾಲೇ ಮೂರು ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ್ದ ನಟ ಕಿಚ್ಚ ಸುದೀಪ್ ಪೈಲ್ವಾನ್ ಗಾಗಿ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್ ನಡೆಸಿದ್ದಾರೆ. ಡಬ್ಬಿಂಗ್ ಅನ್ನು ಆನಂದಿಸುವುದಾದರೆ ಅದು ನಟನಿಗೆ ಅತ್ಯ್ಂತ ಸುಂದರವಾಗಿ ಕಾಣ್ಸುತ್ತದೆ.  “ಡಬ್ಬಿಂಗ್ ನಿಮಗೆ ಲೋಪದೋಷಗಳನ್ನು ಮುಚ್ಚಲು ಸಹಾಯ ಮಾಡುತ್ತದೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ" ಅವರು ವಿವರಿಸಿದ್ದಾರೆ.ಸ್ವತಃ ನಿರ್ದೇಶಕರಾಗಿದ್ದರೂ, ಸುದೀಪ್ ಅವರು ಪೈಲ್ವಾನ್ ನಲ್ಲಿ ಕೇವಲ ನಟನಾಗಿ ಕಾಣಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ನಿರ್ದೇಶಕ ಕೃಷ್ಣ ಅವರ ದೃಷ್ಟಿಕೋನದಿಂದ ಚಿತ್ರ ಮೂಡಿಬಂದಿದೆ “ನಾನು ನಟನಾಗಿರುವುದರಿಂದ, ನನ್ನ ಯೋಜನೆಗಾಗಿ ನಾನು ಕಾಯಲಿಲ್ಲ. ಕೃಷ್ಣ ಅವರು ನಾನು ಪ್ರತಿದಿನ ಬೆಳಿಗ್ಗೆ ಚರ್ಚೆ ಮತ್ತು ಆಲೋಚನೆಗಳ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ನಾವು ಕೆಲವೊಮ್ಮೆ ಚರ್ಚೆಗಳು ಮತ್ತು ವಾದಗಳನ್ನು ಸಹ ಮಾಡಿದ್ದೇವೆ.  ಹೇಗಾದರೂ, ನಿರ್ದೇಶಕರಾಗಿ, ಕೃಷ್ಣ ಅವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡಿದ್ದಾರೆ.  ಅದನ್ನು ನಾನು ತೆರೆಗೆ ತರಲು ಪ್ರಯತ್ನಿಸಿದೆ "ಎಂದು ಅವರು ಹೇಳುತ್ತಾರೆ.

ಸುದೀಪ್‌ಗಾಗಿ, ಪೈ;ಲ್ವಾನ್ ನಲ್ಲಿ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅಭಿನಯಿಸಿದ್ದು ಈ ಮೂಲಕ ದಕ್ಷಿಣ ಭಾರತದ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. "ಸುನೀಲ್ ಗೌರವಾನ್ವಿತ ನಟ. ನಾನು ಕ್ರಿಕೆಟ್ ಮೈದಾನದಲ್ಲಿ ಗಮನಿಸಿದ್ದೇನೆ. ಈ ನಿರ್ದಿಷ್ಟ ಪಾತ್ರವು ಅವರಂತಹ ನಟನನ್ನು ಹೆಚ್ಚು ಒಪ್ಪಿಕೊಳ್ಳುತ್ತದೆ. ಅವರು ತುಂಬಾ ಪ್ರೀತಿಯಿಂ, ಯುವ ವಿದ್ಯಾರ್ಥಿಯಂತೆ ಅವರು ಕನ್ನಡವನ್ನೂ ಕಲಿತರು, ”

“ಒಬ್ಬ ನಟನಿಗೆ, ನಿರ್ದೇಶಕರ ದೃಷ್ಟಿಗೆ ಅನುಗುಣವಾಗಿ ಒಂದು ಪಾತ್ರವನ್ನು ಮಾಡಿದ ನಂತರ ಅಲ್ಲಿಗೇ ಅದನ್ನು ಬಿಟ್ಟುಕೊಡಬೇಕು. ಪೈಲ್ವಾನ್ ತಯಾರಿಯ ಸಮಯದಲ್ಲಿ , ನಾನು ಕೋಟಿಗೊಬ್ಬ 3 ಮತ್ತು ದಬಾಂಗ್ 3 ಸೆಟ್ ಗಳಿಗೆ ಹೋಗಿದ್ದೆ. ಹಾಗಾಗಿ ಯಾವುದೇ ಪಾತ್ರವನ್ನು ನಾನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸಹಜವಾಗಿ, ಪೈಲ್ವಾನ್ ನೊಂದಿಗೆ ಶಿಸ್ತು, ತಾಲೀಮು ಈಗ ನಿತ್ಯದ ಗುಣವಾಗಿ ಮಾರ್ಪಟ್ಟಿದೆ.ಸ್ವಲ್ಪ ಪರಿಹಾರವಿದ್ದರೂ, ನಾನು ಇನ್ನೂ ಅದೇ ಕಟ್ಟುಪಾಡುಗಳನ್ನು ನಿರ್ವಹಿಸುತ್ತಿದ್ದೇನೆ, ”ಎಂದು ಅವರು ಹೇಳೀದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp