ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಿರುತೆರೆ ವೀಕ್ಷಕರಿಗೊಂದು ಸಿಹಿ ಸುದ್ದಿ: ಕನ್ನಡದಲ್ಲೂ ಬರುತ್ತಿದೆ 'ಮಹಾಭಾರತ'

ಕನ್ನಡದಲ್ಲಿ ಡಬ್ಬಿಂಗ್ ಪರ ಹಾಗೂ ವಿರೋಧದ ನಡುವೆ ಹೋರಾಟಗಳು ನಡೆಯುತ್ತಿರುವ ನಡುವೆಯೇ ಈ ಡಬ್ಬಿಂಗ್ ವಿಚಾರ ಮತ್ತೊಂದು ಮಜಲಿಗೆ ತಲುಪಿದೆ. ಈಗಾಗಲೇ ಕನ್ನಡಕ್ಕೆ ಡಬ್ ಆಗಿದ್ದ ಸಾಕಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದು, ಇವುಗಳಲ್ಲಿನ ಕೆಲ ಸಿನಿಮಾಗಳನ್ನು ಉದಯ ಟಿವಿ ಪ್ರಸಾರ ಮಾಡಿದೆ. ಇಷ್ಟು ದಿನ ಸಿನಿಮಾಗಳಲ್ಲಿ...
Published on

ಬೆಂಗಳೂರು: ಕನ್ನಡದಲ್ಲಿ ಡಬ್ಬಿಂಗ್ ಪರ ಹಾಗೂ ವಿರೋಧದ ನಡುವೆ ಹೋರಾಟಗಳು ನಡೆಯುತ್ತಿರುವ ನಡುವೆಯೇ ಈ ಡಬ್ಬಿಂಗ್ ವಿಚಾರ ಮತ್ತೊಂದು ಮಜಲಿಗೆ ತಲುಪಿದೆ. ಈಗಾಗಲೇ ಕನ್ನಡಕ್ಕೆ ಡಬ್ ಆಗಿದ್ದ ಸಾಕಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದು, ಇವುಗಳಲ್ಲಿನ ಕೆಲ ಸಿನಿಮಾಗಳನ್ನು ಉದಯ ಟಿವಿ ಪ್ರಸಾರ ಮಾಡಿದೆ. ಇಷ್ಟು ದಿನ ಸಿನಿಮಾಗಳಲ್ಲಿ ಕೇಳಿಸುತ್ತಿದ್ದ ಡಬ್ಬಿಂಗ್ ಸದ್ದು ಇದೀಗ ಕಿರುತೆರೆಯಲ್ಲಿಯೂ ಕೇಳಿಸಲು ಆರಂಭವಾಗಿದೆ. 

ಹಿಂದಿಯಲ್ಲಿ ಈಗಾಗಲೇ ಜನರ ಮೆಚ್ಚುಗೆ ಗಳಿಸಿದ್ದ ಮಹಾಭಾರತ ಧಾರಾವಾಹಿ ಕನ್ನಡದಲ್ಲಿಯೂ ಪ್ರಸಾರವಾಗವಲಿದೆ. ಖಾಸಗಿ ಸುವಣ್ಣ ವಾಹಿನಿಯಲ್ಲಿ ಏಪ್ರಿಲ್ 13ರಿಂದ ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ ಎಂದು ವರದಿಗಳು ತಿಳಿಸಿವೆ. 

ಪೌರಾಣಿಕ ಧಾರಾವಾಹಿ ಆಗಿರುವ ಮಹಾಭಾರತ ಕನ್ನಡಡಲ್ಲಿಯೂ ಪ್ರಸಾರವಾಗುತ್ತಿರುವುದರಿಂದ ಕನ್ನಡಿಗರೂ ಕೂಡ ಮಹಾಭಾರತವನ್ನು ತಮ್ಮ ಭಾಷೆಯಲ್ಲಿಯೇ ನೋಡಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com