ಲಾಕ್ ಡೌನ್ ಮಧ್ಯೆ ನಗುವಿನ ಬುಗ್ಗೆ ಉಕ್ಕಿಸುವ ಚಿತ್ರದ ತಯಾರಿಯಲ್ಲಿ ನಿರ್ದೇಶಕ ಗುರುಪ್ರಸಾದ್!

ಮಠ, ಎದ್ದೇಳು ಮಂಜನಾಥದಂತಹ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಗುರುಪ್ರಸಾದ್ ಲಾಕ್ ಡೌನ್ ಮಧ್ಯೆ ಹಾಸ್ಯದ ಮೂಲಕ ನಗುವಿನ ಬುಗ್ಗೆ ಉಕ್ಕಿಸುವ  ಕಥೆಯೊಂದನ್ನು ಪೂರ್ಣಗೊಳಿಸಿದ್ದು, ನಿರ್ಮಾಪಕರೊಂದಿಗೆ ಒಪ್ಪಂದಕ್ಕೆ ಎದುರು ನೋಡುತ್ತಿದ್ದಾರೆ
ನಿರ್ದೇಶಕ ಗುರುಪ್ರಸಾದ್
ನಿರ್ದೇಶಕ ಗುರುಪ್ರಸಾದ್

ಬೆಂಗಳೂರು: ಮಠ, ಎದ್ದೇಳು ಮಂಜನಾಥದಂತಹ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಗುರುಪ್ರಸಾದ್ ಲಾಕ್ ಡೌನ್ ಮಧ್ಯೆ ಹಾಸ್ಯದ ಮೂಲಕ ನಗುವಿನ ಬುಗ್ಗೆ ಉಕ್ಕಿಸುವ  ಕಥೆಯೊಂದನ್ನು ಪೂರ್ಣಗೊಳಿಸಿದ್ದು, ನಿರ್ಮಾಪಕರೊಂದಿಗೆ ಒಪ್ಪಂದಕ್ಕೆ ಎದುರು ನೋಡುತ್ತಿದ್ದಾರೆ

ಸೀಮಿತವಾಗಿರುವ ಸ್ಥಳದಲ್ಲಿ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದು, ತಮ್ಮ ಅಧಿಕೃತ ಆಪ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಇದರ ಕಾರ್ಯ ಪ್ರಗತಿಯಲ್ಲಿದೆ

ಲಾಕ್ ಡೌನ್ ಮಧ್ಯೆ ಚಿತ್ರವೊಂದರ ತಯಾರಿಕೆಯಲ್ಲಿ ನಿರ್ದೇಶಕ ತೊಡಗಿಸಿಕೊಂಡಿರುವುದು ಬಹಳ ಕುತೂಹಲ ಮೂಡಿಸಿದೆ. ಕಥೆಯನ್ನು ಪೂರ್ಣಗೊಳಿಸಿರುವುದಾಗಿ  ತಿಳಿಸಿರುವ ಗುರುಪ್ರಸಾದ್, ಜನಪ್ರಿಯ ಹಾಸ್ಯ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡು ಸದ್ಯದಲ್ಲಿಯೇ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿದ್ದಾರೆ. 

ಒಬ್ಬ ರಂಜಕನಾಗಿ ಯಾವುದೇ ಕಲಾವಿದರ ಅಗತ್ಯವಿಲ್ಲ, ನಾನೇ ಎಲ್ಲರನ್ನು ನಗಿಸುತ್ತೇನೆ ಎಂದು ಹೇಳುವ ಗುರುಪ್ರಸಾದ್, ಪ್ರತಿದಿನ ಫೇಸ್ ಬುಕ್ ಲೈವ್ ಮೂಲಕ ಜನರನ್ನು ತಲುಪುವುದಾಗಿ ತಿಳಿಸಿದ್ದಾರೆ. 

ಪರಿಸ್ಥಿತಿ ಸುಧಾರಿಸಿದರೆ ನಟ ಜಗ್ಗೇಶ್ ಅವರೊಂದಿಗೆ ರಂಗನಾಯಕ ಚಿತ್ರವನ್ನು ಆರಂಭಿಸುವುದಾಗಿ ತಿಳಿಸಿರುವ ಗುರುಪ್ರಸಾದ್, ಲಾಕ್ ಡೌನ್ ಅವಧಿಯಲ್ಲಿ ಚಲನಚಿತ್ರ ಮಾಡಬಹುದೆಂಬುದುನ್ನು  ಸಾಬೀತುಪಡಿಸಲು ಬಯಸುತ್ತೇನೆ ಮತ್ತು ಇದು ಅಪರೂಪದ ಪ್ರಯೋಗವಾಗಿದೆ ಎಂದು ಹೇಳಿದ್ದಾರೆ. 

ಚಿತ್ರದ ಕಥೆಯನ್ನು ಬಹಿರಂಗಪಡಿಸಲು ನಿರಾಕಿಸಿದ ಗುರುಪ್ರಸಾದ್,  ಇದು ಎರಡೂವರೆ ಗಂಟೆಗಳ ಹಾಸ್ಯದ ರಣದೌತಣ ಉಣಬಡಿಸಲಿದೆ. ಸೀಮಿತ ಬಜೆಟ್ ನಲ್ಲಿ ಚಿತ್ರವನ್ನು ತಯಾರಿಸಲಿದ್ದು, ಬಿಡುಗಡೆಯ ತಂತ್ರಗಳು ಕುತೂಹಲಕವಾಗಿರಲಿವೆ. ವೀಕ್ಷಕರು 100 ರೂ. ಪಾವತಿಸುವ ಮೂಲಕ ಆಪ್ ನಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಆಪ್ ತಯಾರಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com