ಸ್ವತಂತ್ರ ಸಂಗೀತದೊಂದಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ವಾಸುಕಿ ವೈಭವ್ ಪಾದಾರ್ಪಣೆ!

ಬಿಗ್ ಬಾಸ್ ಮನೆಯಲ್ಲಿ 112 ದಿನಗಳ ಕಾಲ ತಂಗಿದ್ದ ವಾಸುಕಿ ವೈಭವ್ ಅವರು ಸಂಗೀತಕ್ಕೆ ಮಾತ್ರ ಮೋಸ ಮಾಡಿರಲಿಲ್ಲ. ಮನೆಯಲ್ಲಿದ್ದರೂ ಅವರು ರಚಿಸಿದ್ದ ಮನಸಿಂದಾ ಯಾರೂ ಕೆಟ್ಟೋರಲ್ಲಾ ಎಂಬ ಹಾಡು ಫೇಮಸ್ ಆಗಿತ್ತು. 
ವಾಸುಕಿ ವೈಭವ್
ವಾಸುಕಿ ವೈಭವ್

ಬಿಗ್ ಬಾಸ್ ಮನೆಯಲ್ಲಿ 112 ದಿನಗಳ ಕಾಲ ತಂಗಿದ್ದ ವಾಸುಕಿ ವೈಭವ್ ಅವರು ಸಂಗೀತಕ್ಕೆ ಮಾತ್ರ ಮೋಸ ಮಾಡಿರಲಿಲ್ಲ. ಮನೆಯಲ್ಲಿದ್ದರೂ ಅವರು ರಚಿಸಿದ್ದ ಮನಸಿಂದಾ ಯಾರೂ ಕೆಟ್ಟೋರಲ್ಲಾ ಎಂಬ ಹಾಡು ಫೇಮಸ್ ಆಗಿತ್ತು. 
 
ವಾಸುಕಿ ಅವರು ಸತ್ಯಪ್ರಕಾಶ್ ನಿರ್ದೇಶನದ ರಾಮ ರಾಮ ರೇ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದರು. ಹಳೆಯ ಸ್ನೇಹಿತ ನೋಬಿನ್ ಪೌಲ್ ಅವರೊಂದಿಗೆ ಸಹಭಾಗಿತ್ವದಲ್ಲಿ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗಾಡ್ ಫಾದರ್ ಸ್ಟುಡಿಯೋವನ್ನು ಕಟ್ಟಿಕೊಂಡು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ತಂಡದಲ್ಲಿ ಅಂತಾರಾಷ್ಟ್ರೀಯ ಮ್ಯೂಜಿಶಿಯನ್ ಸಹ ಕೆಲಸ ಮಾಡಲಿದ್ದಾರೆ. ಪ್ರಸ್ತುತ ಪೀಳಿಗೆಯ ಜನರಿಗೆ ರಂಗಭೂಮಿ ಮತ್ತು ಜಾನಪದ ಸಂಗೀತ ನೀಡುವ ಬಗ್ಗೆ ಆಲೋಚಿಸುತ್ತಿರುವುದಾಗಿ ಎಂದು ವಾಸುಕಿ ವೈಭವ್ ಹೇಳಿದ್ದಾರೆ. 

ಕೊರೋನಾ ವೈರಸ್ ಚಿತ್ರರಂಗವನ್ನು ಸ್ಧಬ್ಧಗೊಳಿಸಿದೆ. ಇನ್ನು ವಾಸುಕಿ ಅವರು ಬಿಗ್ ಬಾಗ್ ಗೆ ಹೋಗುವ ಮೊದಲು ಕೆಲವೊಂದು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ಲಾ ಮತ್ತು ಪನ್ನಗಾ ಭರಣ ಚಿತ್ರಗಳಿಗೆ ನಿರ್ದೇಶನ ಮಾಡಲಿದ್ದಾರೆ. ಜೊತೆಗೆ ಕನ್ನಡ ವೆಬ್ ಸರಣಿ ಹನಿಮೂನ್ ಗೂ ಸಂಗೀತ ಸಂಯೋಜಿಸಲಿದ್ದಾರೆ. ಇದರ ಜೊತೆಗೆ ಧನಂಜಯ್ ಅಭಿನಯದ ರಾಸ್ಕಲ್ ಚಿತ್ರ ಬೇರೆ ಅವರ ಕೈಯಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com