ಗೋಳಾಡಿ ಅತ್ತು.. ವಿಷ್ಣುವರ್ಧನ್ ಕ್ಷಮೆ ಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು!

ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ದಾದಾ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.
ನಟ ವಿಜಯ್ ರಂಗರಾಜು ಕ್ಷಮೆ ಯಾಚನೆ
ನಟ ವಿಜಯ್ ರಂಗರಾಜು ಕ್ಷಮೆ ಯಾಚನೆ
Updated on

ಬೆಂಗಳೂರು: ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ದಾದಾ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.

ಈ ಹಿಂದೆ ತೆಲುಗು ಸಂದರ್ಶನವೊಂದರಲ್ಲಿ ನಟ ವಿಷ್ಣು ವರ್ಧನ್ ರ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ವಿಷ್ಣು ಕುಟುಂಬದ ಕ್ಷಮೆ ಯಾಚಿಸಿದ್ದಾರೆ.

ಈ ಕುರಿತಂತೆ ವಿಡಿಯೋ ಮಾಡಿರುವ ನಟ ವಿಜಯ್ ರಂಗರಾಜು, 'ನಾನು ವಿಷ್ಣು ದಾದಾ ಬಗ್ಗೆ ತಪ್ಪು ಮಾತಾಡಿದ್ದೇನೆ, ನನ್ನನ್ನು ಕ್ಷಮಿಸಿ ಬಿಡಿ. ನಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ನಾನು ಈಗ ಕೊರೊನಾದಿಂದ ಬಳಲುತ್ತಿದ್ದೇನೆ. ವಿಷ್ಣು ಅವರ ಅಭಿಮಾನಿಗಳಿಗೆ, ವಿಷ್ಣು ಅವರ  ಕುಟುಂಬದವರಿಗೆ, ಟಾಪ್‌ ನಟರಾದ ಪುನೀತ್ ರಾಜ್‌ಕುಮಾರ್, ಸುದೀಪ್‌, ಉಪೇಂದ್ರ ಅವರಲ್ಲಿ ಬೇಡಿ ಕೊಳ್ಳುತ್ತಿದ್ದೇನೆ. ನಾನು ಮಾಡಿದ್ದು ದೊಡ್ಡ ತಪ್ಪು. ನನ್ನನ್ನು ಕ್ಷಮಿಸಿಬಿಡಿ. ನಾನು ವಿಷ್ಣು ದಾದಾ ಬಗ್ಗೆ ಮಾತಾಡಿದ್ದು ತಪ್ಪು. ಈ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ. ಕೊರೊನಾದಿಂದ  ಬಳಲುತ್ತಿದ್ದೇನೆ. ನಾನು ಪಾಪ ಮಾಡಿದ್ದೇನೆ' ಎಂದು ಗೋಳಾಡುತ್ತ ಕ್ಷಮೆ ಕೇಳಿದ್ದಾರೆ.

'ನನ್ನನ್ನು ಬಿಟ್ಟುಬಿಡಿ. ನನ್ನ ಬಳಿ ದುಡ್ಡು ಇಲ್ಲ, ಏನೂ ಇಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದೇನೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಮಾತಾಡಿದ್ದು ತಪ್ಪು. ವಿಷ್ಣುವರ್ಧನ್ ಅವರ ಎಲ್ಲ ಫ್ಯಾನ್ಸ್‌ಗೆ ಕಾಲಿಗೆ ಬಿದ್ದು, ನಾನು ನಮಸ್ಕಾರ ಮಾಡಿ ಕೇಳಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ. ವಿಷ್ಣು  ದಾದಾ ಅವರೇ ನನ್ನನ್ನು ಕ್ಷಮಿಸಿಬಿಡಿ ಸ್ವಾಮಿ. ವಿಷ್ಣುವರ್ಧನ್ ಅವರ ಅಭಿಮಾನಿಗಳೇ, ಕರ್ನಾಟಕದ ಜನರೇ ನನ್ನನ್ನು ಕ್ಷಮಿಸಿಬಿಡಿ. ವಿಷ್ಣುವರ್ಧನ್‌ ಅವರ ಬಗ್ಗೆ ಮಾತಾಡಿ ನಾನು ಬಹಳ ದೊಡ್ಡ ತಪ್ಪು ಮಾಡಿಬಿಟ್ಟಿದ್ದೇನೆ. ಅಂತಹ ದೊಡ್ಡ ವ್ಯಕ್ತಿಯನ್ನು ನಾನು ಮುಟ್ಟುವುದಕ್ಕೆ ಸಾಧ್ಯವೇ?  ಯಾವುದೋ ಭರದಲ್ಲಿ ಏನೇನೋ ಮಾತನಾಡಿ ತಪ್ಪು ಮಾತಾಡಿಬಿಟ್ಟೆ. ಇನ್ಮುಂದೆ ಕನ್ನಡ, ತಮಿಳು, ತೆಲುಗು, ಮಲಯಾಳಂನ ಯಾವ ಕಲಾವಿದರ ಬಗ್ಗೆಯೂ ಈ ರೀತಿ ಮಾತನಾಡುವುದಿಲ್ಲ ಎಂದು ವಿಜಯ್ ರಂಗರಾಜು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com