

ನಿರ್ದೇಶಕ ಶಶಾಂಕ್ ಅವರ ಮುಂದಿನ ಪ್ರಾಜೆಕ್ಟ್ ನಲ್ಲಿ ಉಪೇಂದ್ರಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿಲ್ಲ.
ಉಪೇಂದ್ರ ಜೊತೆ ನಿಶ್ವಿಕಾ ನಾಯ್ಡು ನಟಿಸುತ್ತಿರುವುದನ್ನು ಸಿನಿಮಾ ತಂಡ ಸ್ಪಷ್ಟ ಪಡಿಸಿತ್ತು. ಆಗಸ್ಟ್ 15 ರಂದು ಮುಹೂರ್ಥ ನೆರವೇರಿತ್ತು.
ನಟ ಉಪೇಂದ್ರ ಬುದ್ದಿವಂತ 2 ಮತ್ತು ರವಿಚಂದ್ರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಅದು ಪೂರ್ಣಗೊಂಡ ನಂತರ ಫೆಬ್ರವರಿ ನಂತರ ಶಶಾಂಕ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ.
ಶಶಾಂಕ್ ಮತ್ತು ಉಪೇಂದ್ರ ಅವರ ಜೊತೆ ಕೆಲಸ ಮಾಡಲು ನಿಶ್ವಿಕಾ ಉತ್ಸುಕಳಾಗಿದ್ದರು. ಆದರೆ ಸಿನಿಮಾ ಕತೆ ಬದಲಾವಣೆ ಹಾಗೂ ಶೂಟಿಂಗ್ ಇನ್ನು ಆರಂಭವಾಗದೇ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಶ್ವಿಕಾ ಜೆಂಟಲ್ ಮ್ಯಾನ್, ಗಾಳಿಪಟ-2.ಸಿನಿಮಾಗಳಲ್ಲಿ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಶಾಂಕ್ ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.