ನಿಯಮ ಮೀರಿ ಗಜರಾಜನನ್ನು ಶೂಟ್ ಮಾಡಿದ ಚಿತ್ರತಂಡ, ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾಗೆ ಸಂಕಷ್ಟ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ  ‘ಭಜರಂಗಿ -2’  ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ಚಿತ್ರತಂಡ ಶೂಟಿಂಗ್ ವೇಳೆ ಅರಣ್ಯ ಇಲಾಖೆ ನಿಯಮಗಳನ್ನು ಮುರಿದಿದೆ ಎಂಬ ಆರೋಪ ಎದುರಿಸುತ್ತಿದೆ.ಸಕ್ರೆಬೈಲು ಆನೆ ಶಿಬಿರದಲ್ಲಿ ಚಿತ್ರೀಕರಣಕ್ಕೆ ಒಂದಿ ದಿನ ಅನುಮತಿ ನೀಡಲಾಗಿತ್ತು. ಆದರೆ ಚಿತ್ರತಂಡದ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾ
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್
Updated on: 

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ  ‘ಭಜರಂಗಿ -2’  ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ಚಿತ್ರತಂಡ ಶೂಟಿಂಗ್ ವೇಳೆ ಅರಣ್ಯ ಇಲಾಖೆ ನಿಯಮಗಳನ್ನು ಮುರಿದಿದೆ ಎಂಬ ಆರೋಪ ಎದುರಿಸುತ್ತಿದೆ.ಸಕ್ರೆಬೈಲು ಆನೆ ಶಿಬಿರದಲ್ಲಿ ಚಿತ್ರೀಕರಣಕ್ಕೆ ಒಂದಿ ದಿನ ಅನುಮತಿ ನೀಡಲಾಗಿತ್ತು. ಆದರೆ ಚಿತ್ರತಂಡದ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಥಳದಲ್ಲಿ ಚಿತ್ರೀಕರಣ ಮಾಡಲು ಮಾತ್ರ ಅನುಮತಿ ನೀಡಲಾಗಿದೆ  ಆದರೆ ಚಿತ್ರತಂಡ ಆನೆಗಳ ಶೂಟಿಂಗ್ ವೇಳೆ ನಿಯಮಗಳನ್ನು ಉಲ್ಲಂಘಿಸಿರುವ ಮಾಹಿತಿ ಬಂದಿದೆ ಎಂದು  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್ ಮೋಹನ್ ಪತ್ರಿಕೆಗೆ ಹೇಳಿದ್ದಾರೆ. ಚೊತ್ರತಂಡದ ಈ ನಿಯಮ ಉಲ್ಲಂಘನೆ ಪ್ರಕರಣ ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು  ಎಂದು ಅವರು ಎಚ್ಚರಿಸಿದ್ದಾರೆ.

"ಒಂದು ಶಾಟ್ ನಲ್ಲಿ ಸಾಗರ್ ಅನ್ನು ನೀರಲ್ಲಿ ಬೀಳಿಸಲಾಗುವುದು ಆ ನಂತರ ನಟ ಯಾವುದೇ ಕುಶನ್ ಅಥವಾ ರಕ್ಷಣೆಯಿಲ್ಲದೆಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕ್ಯಾಂಪ್ ಸೈಟ್ ನಲ್ಲಿ ಆನೆಯ ಮೇಲೆಕುಳಿತಿರುವುದು ತೋರಿಸಲಾಗುತ್ತದೆ ಎಂದು ಸಿಬ್ಬಂದಿಯೊಬ್ಬರು ವರದಿ ಮಾಡಿದ್ದಾರೆ"

ಯಾವುದೇ ಆನೆಯ ಶಾಟ್ಸ್ ಇರಲಿಲ್ಲ: ನಿರ್ದೇಶಕ ಸ್ಪಷ್ಟನೆ

ಅಧಿಕೃತ ಶೂಟಿಂಗ್ ನಲ್ಲಿ ನಾವು ಯಾವುದೇ ಆನೆಯ ಶಾಟ್ ಗಳನ್ನು ತೆಗೆದುಕೊಂಡಿಲ್ಲ ಎಂಬುದಾಗಿ ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ. "ಕಾಡಿನಿಂದ ಕ್ಯಾಂಪ್ ಸೈಟ್ ಗೆ ಹಾದುಹೋಗುವ ಆನೆಗಳನ್ನು ಕಂಪ್ಯೂಟರ್ ಗ್ರಾಫಿಕ್ಸ್ಗಾಗಿ ಸೆರೆಹಿಡಿಯಲಾಗಿದೆ. ಚಿತ್ರೀಕರಣದ ವೇಳೆ  ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯ ಸಿಬ್ಬಂದಿ ಸಹ ಹಾಜರಿದ್ದರು.  ಯಾವುದೇ ಆನೆಗಳ ಮೂಮೆಂಟ್ ಗಳನ್ನು ತಡೆಯಲಾಗಲಿಲ್ಲ" ಅವರು ವಿವರಿಸಿದರು.

ಕ್ರಾಲ್ಸ್  ಎನ್ನುವುದು ಸಣ್ಣ ಮರದ ಆವರಣವಾಗಿದ್ದು  ಸೆರೆಹಿಡಿದ ಕಾಡಾನೆಗಳನ್ನು ಪಳಗಿಸುವ ಮೊದಲು ಆನೆ ಶಿಬಿರಗಳಲ್ಲಿ ಇಡಲು ಬಳಸಲಾಗುತ್ತದೆ. ಶೂಟಿಂಗ್ ನಡೆದಿದ್ದ ವೇಳೆ ಚಿತ್ರದುರ್ಗದಿಂದ ಇತ್ತೀಚೆಗೆ ಸೆರೆಹಿಡಿಯಲಾದ ಗಂಡಾನೆಯೊಂದನ್ನು ಇದರಲ್ಲಿ ಇರಿಸಲಾಗಿದೆ. ಆದರೆ ಚಿತ್ರತಂಡ ನಿಯಮಗಳನ್ನು ಮೀರಿ  ಆ ಆನೆಯ ಶೂಟಿಂಗ್ ನಡೆಸಿದೆ" ಎಂದು ಅಧಿಕಾರಿ ವಿವರಿಸಿದರು. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ನಿಯಮಗಳನ್ನು ಚಲನಚಿತ್ರ  ನಿರ್ಮಾಪಕರು ಉಲ್ಲಂಘಿಸಿರುವುದು ಇದೇ ಮೊದಲಲ್ಲ. ಕಳೆದ ಡಿಸೆಂಬರ್‌ನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಳಿಪಟ -2 ಚಿತ್ರೀಕರಣದ ವೇಳೆ ಸಹ ಇಂತಹುದೇ ಘಟನೆ ನಡೆದಿತ್ತು. ಅರಣ್ಯ ಪ್ರದೇಶದ ಹೊರಗೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಹಲವಾರು ಉಲ್ಲಂಘನೆಗಳನ್ನು ವರದಿ ಮಾಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಲಯಾಳಂಕಮರ್ಷಿಯಲ್ ಚಿತ್ರ  ‘ನಲ್ಪಥಿಯೊನ್ನು’ ಚಿತ್ರೀಕರಣವನ್ನು ತಲಕಾವೇರಿ  ವನ್ಯಜೀವಿ ಅಭಯಾರಣ್ಯದಲ್ಲಿನಿಷೇಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com