ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಸಮೀಕ್ಷೆ: ಕೆಜಿಎಫ್ ಟಾಪ್ 2, ಉಪ್ಪಿ ಅಭಿನಯದ ‘ಕಬ್ಬ’ 3ನೇ ಸ್ಥಾನದಲ್ಲಿ

ಇದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ! ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ ಸೈಟ್ ಗಳು ನಡೆಸಿರುವ ದೇಶದ ಟಾಪ್ 10 ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ," ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ.
ಕೆಜಿಎಫ್  ಕಬ್ಬ
ಕೆಜಿಎಫ್ ಕಬ್ಬ
Updated on

ಇದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ! ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ ಸೈಟ್ ಗಳು ನಡೆಸಿರುವ ದೇಶದ ಟಾಪ್ 10 ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ," ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಘಟಾನುಘಟಿಗಳ ಸಿನಿಮಾಗಳು ಸ್ಥಾನಗಳನ್ನು ಪಡೆದಿದೆ,

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ "ಕಬ್ಜ".

ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಪ್ ಟೆನ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನವನ್ನು ಪಡೆದಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಗಳ ತೀವ್ರ ಸ್ಪರ್ಧೆಯ ನಡುವೆ ಕನ್ನಡ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಹೆಸರಾಗುತ್ತಿರುವುದು ಖುಷಿಯ ಸಂಗತಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com