ಹೈದರಾಬಾದ್: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಭೀತಿ ಬಾಹುಬಲಿ ನಟ ಪ್ರಭಾಸ್ ಗೂ ತಟ್ಟಿದ್ದು, ಇತ್ತೀಚೆಗಷ್ಟೇ ವಿದೇಶದಿಂದ ವಾಪಸ್ ಆಗಿದ್ದ ನಟ ಪ್ರಭಾಸ್ ಇದೀಗ ಸ್ವಯಂ ಗೃಹ ಬಂಧನ ವಿಧಿಸಿಕೊಂಡಿದ್ದಾರೆ.
ಈ ಕುರಿತಂತೆ ನಟ ಪ್ರಭಾಸ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ತಮ್ಮ ನೂತನ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿ ವಾಪಸ್ ಆಗಿದ್ದೇನೆ. ಇದೀಗ ಮುಂದಿನ 15 ದಿನಗಳ ಕಾಲ ಸ್ವಯಂ ಗೃಹಬಂಧನದಲ್ಲಿದ್ದೇನೆ. ನೀವು ಕೂಡ ಸುರಕ್ಷಿತವಾಗಿರಿ ಎಂದು ನಟ ಪ್ರಭಾಸ್ ಟ್ವೀಟ್ ಮಾಡಿದ್ದಾರೆ.
ಮೂಲಗಳ ಪ್ರಕಾರ ನಟ ಪ್ರಭಾಸ್ ಇನ್ನೂ ಹೆಸರಿಡದ ತಮ್ಮ ನೂತನ ಚಿತ್ರದ ಚಿತ್ರೀಕರಣಕ್ಕಾಗಿ ಜಾರ್ಜಿಯಾಗೆ ಹೋಗಿದ್ದರು. ಇತ್ತೀಚೆಗಷ್ಟೇ ಅವರು ಭಾರತಕ್ಕೆ ಆಗಮಿಸಿದ್ದು, ಇದೀಗ ಸ್ವಯಂ ಗೃಹ ಬಂಧನದಲ್ಲಿದ್ದಾರೆ. ಆ ಮೂಲಕ ನಟ ಪ್ರಭಾಸ್ ಇತರರಿಗೆ ಮಾದರಿಯಾಗಿದ್ದಾರೆ.
ನಟ ಪ್ರಭಾಸ್ ಖ್ಯಾತ ನಿರ್ದೇಶಕ ರಾಧಾಕೃಷ್ಣ ನಿರ್ದೇಶನ ಮಾಡುತ್ತಿರುವ ಇನ್ನೂ ಹೆಸರಿಡಿದ ಈ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಯೂರೋಪಿನ ಜಾರ್ಜಿಯಾಗೆ ತೆರಳಿದ್ದರು. ಪ್ರಭಾಸ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ಜೊತೆಯಾಗಿದ್ದು,ಇದು ಪ್ರಭಾಸ್ ನಟನೆಯ 20ನೇ ಸಿನಿಮಾ ಆಗಿದೆ. ಇದರ ಚಿತ್ರೀಕರಣ ಜಾರ್ಜಿಯಾದಲ್ಲಿ ನಡೆಯುತ್ತಿತ್ತು. ಈಗ ಈ ಶೆಡ್ಯೂಲ್ಗೆ ತೆರೆ ಎಳೆಯಲಾಗಿದೆ. ಚಿತ್ರೀರಕಣದ ಶೆಡ್ಯೂಲ್ ಪೂರ್ಣಗೊಳಿಸಿರುವ ಚಿತ್ರತಂಡ ಫಸ್ಟ್ ಲುಕ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಇನ್ನು ಬಾಲಿವುಡ್ ನಟಿ ಈ ಚಿತ್ರದಲ್ಲಿ ಭಾಗ್ಯಶ್ರೀ, ಅನುಪಮ್ ಖೇರ್, ಶಬಾನಾ ಅಜ್ಮಿ ಅವರು ಸಹ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಸದ್ಯದಲ್ಲೇ ರಿವೀಲ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಟ್ವೀಟ್ ಮಾಡಿದೆ.
Advertisement