ಸ್ಯಾಂಡಲ್ ವುಡ್ ನ 'ಮನರೂಪ'ಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ ಒಂದಾದ ’ಮನರೂಪ’ ಅಂತರಾಷ್ಟ್ರೀಯ ಚಿತ್ರೋತ್ಸವದ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಮನರೂಪ
ಮನರೂಪ
Updated on: 

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ ಒಂದಾದ ’ಮನರೂಪ’ ಅಂತರಾಷ್ಟ್ರೀಯ ಚಿತ್ರೋತ್ಸವದ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಮನರೂಪ" ಚಿತ್ರ "ಉತ್ತಮ ಪ್ರಯೋಗಾತ್ಮಕ ಚಿತ್ರ" ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

ಅಷ್ಟೇ ಅಲ್ಲದೆ ಅಮೆರಿಕಾದ ಮಿಯಾಮಿ ಚಿತ್ರೋತ್ಸವ ಹಾಗೂ ಟರ್ಕಿಯ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಹ ಕನ್ನಡ ಚಿತ್ರ ಮನರೂಪ ಆಯ್ಕೆಗೊಂಡಿದೆ.

ಕಿರಣ್‌ ಹೆಗಡೆ ನಿರ್ದೇಶನದ "ಮನರೂಪ" ಹೆಸರೇ ಹೇಳುವಂತೆ ಒಂದು ಮನೋಲೋಕದ ಕಥಾನಕವಾಗಿದೆ. ದಿಲೀಪ್‌ ಕುಮಾರ್‌, ಅನುಷಾ ರಾವ್‌, ನಿಶಾ ಬಿ.ಆರ್‌, ಆರ್ಯನ್‌, ಶಿವಪ್ರಸಾದ್‌ ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com