ಕೋವಿಡ್-19 ವಾರಿಯರ್ಸ್ ಗೆ ಗೌರವ ಸೂಚಿಸುವ ಕಿರುಚಿತ್ರ 'ಡಾರ್ಕ್ ಸ್ಪ್ರೆಡ್'

ಕಿರುಚಿತ್ರ ತಯಾರಕ  ವಾಗ್ಮಿ ಆರ್ ಯಜುರ್ವೇದಿ ಅವರು ಡಾರ್ಕ್ ಸ್ಪ್ರೆಡ್ ಎಂಬ ಇಂಗ್ಲಿಷ್ ಚಿತ್ರದೊಡನೆ ಬಂದಿದ್ದಾರೆ. ಇದು ಕೋವಿಡ್ 19 ಸಾಂಕ್ರಾಮಿಕ ರೋಗದ  ವಿರುದ್ಧ ಹೋರಾಡುವ ವಾರಿಯರ್ಸ್ ನ ತ್ಯಾಗ ಮತ್ತು ಕೊಡುಗೆಗಳನ್ನು ವಿವರಿಸುತ್ತದೆ.
ಡಾರ್ಕ್ ಸ್ಪ್ರೆಡ್
ಡಾರ್ಕ್ ಸ್ಪ್ರೆಡ್
Updated on: 

ಕಿರುಚಿತ್ರ ತಯಾರಕ  ವಾಗ್ಮಿ ಆರ್ ಯಜುರ್ವೇದಿ ಅವರು ಡಾರ್ಕ್ ಸ್ಪ್ರೆಡ್ ಎಂಬ ಇಂಗ್ಲಿಷ್ ಚಿತ್ರದೊಡನೆ ಬಂದಿದ್ದಾರೆ. ಇದು ಕೋವಿಡ್ 19 ಸಾಂಕ್ರಾಮಿಕ ರೋಗದ  ವಿರುದ್ಧ ಹೋರಾಡುವ ವಾರಿಯರ್ಸ್ ನ ತ್ಯಾಗ ಮತ್ತು ಕೊಡುಗೆಗಳನ್ನು ವಿವರಿಸುತ್ತದೆ.

ಸಿಎಸ್‌ಜೆ ಆರ್ಟ್ಸ್ ಸಹಯೋಗದೊಂದಿಗೆ ವಿಆರ್‌ವೈ ಎಂಟರ್‌ಟೈನ್‌ಮೆಂಟ್ ತಯಾರಿಸಿದ ಈ ಚಿತ್ರ ಈಗ ವಿಆರ್‌ವೈ ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ಲಭ್ಯವಿದೆ.

ಡಾರ್ಕ್ ಸ್ಪ್ರೆಡ್ ಕಿರುಚಿತ್ರದ ಬರಹಗಾರ ಚಿಂತನ್ ಆಗಿದ್ದು ವಾಗ್ಮಿ ಈ ಚಿತ್ರದ ಮುಖ್ಯ ಪಾತ್ರಧಾರಿಯೂ ಹೌದು ಪರಿಕಲ್ಪನೆ, ನಿರ್ದೇಶನ,ಛಾಯಾಗ್ರಹಣ, ಎಡಿಟಿಂಗ್, ಸಂಗೀತವನ್ನು ಸಹ  ವಾಗ್ಮಿ ಅವರೇ ನಿರ್ವಹಿಸಿದ್ದು  ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕಿ ವನಶ್ರೀ ಸಿ ಅವರು ಮೇಕಪ್ ಮತ್ತು ವೇಷಭೂಷಣ ವಿನ್ಯಾಸವನ್ನು ನಿರ್ವಹಿಸಿದ್ದಾರೆ.

ವಾಗ್ಮಿ ರಘುನಾಥ್ ಅವರ ಪುತ್ರರಾಗಿದ್ದು,ಅವರು ಅವರು ಉಮಾಪತಿ ಎಸ್ ಗೌಡ ಅವರೊಂದಿಗೆ "ಹೆಬ್ಬುಲಿ" ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.ಸುದೀಪ್ ಅಭಿನಯದ ಈ ಚಿತ್ರವನ್ನು ಎಸ್ ಕೃಷ್ಣ ನಿರ್ದೇಶಿಸಿದ್ದರು.

ಅನೇಕ ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳನ್ನು ಮಾಡಿದ ನಟ-ನಿರ್ದೇಶಕ, ಡಾ ಬ್ಯಾಟ್ ಮತ್ತು ಚೈನೀಸ್ ಜೋಕರ್ ಎಂಬ ಎರಡು ಕಾಲ್ಪನಿಕ ಪಾತ್ರಗಳ ಮೂಲಕ ಪ್ರಸ್ತುತ ಪರಿಸ್ಥಿತಿಯನ್ನು ಚಿತ್ರಿಸುತ್ತಿದ್ದಾರೆ. ಸಾಹಸಮಯ ಮತ್ತು ಕ್ರಿಯಾಶೀಲ ನಿರೂಪಣೆಯು ಈ ಸಾಂಕ್ರಾಮಿಕ ರೋಗವನ್ನು  ನಿವಾರಿಸಲು  24/7 ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಗೌರವ ಸಲ್ಲಿಸಿದೆ. . ಈ ಚಿತ್ರವು ಅವರಿಗೆ ಮೆಚ್ಚುಗೆಯ ಸಂಕೇತವಾಗಿದೆ ಎಂದು ತಯಾರಕರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com