ರಾಯರ ಕುರಿತು ಮರೆಯಲಾಗದ ಘಟನೆ ಹಂಚಿಕೊಂಡ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರೆನ್ನುವುದು ತಿಳಿದ ಸಂಗತಿ. ಅವರೀಗ ರಾಯರ ಕುರಿತು ಮರೆಯಲಾಗದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ರಾಯರ ಕುರಿತು ಮರೆಯಲಾಗದ ಘಟನೆ ಹಂಚಿಕೊಂಡ ಜಗ್ಗೇಶ್
ರಾಯರ ಕುರಿತು ಮರೆಯಲಾಗದ ಘಟನೆ ಹಂಚಿಕೊಂಡ ಜಗ್ಗೇಶ್
Updated on

ನವರಸ ನಾಯಕ ಜಗ್ಗೇಶ್ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರೆನ್ನುವುದು ತಿಳಿದ ಸಂಗತಿ. ಅವರೀಗ ರಾಯರ ಕುರಿತು ಮರೆಯಲಾಗದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

"ಸ್ನೇಹಿತರೇ ಇಂದು ಮರೆಯಲಾಗದ ದಿನ ರಾಯರೇ ಅಲ್ಪಸ್ವಲ್ಪ ಚಿತ್ರಗೀತೆ ಹಾಡುವೆ. ನಿಮ್ಮ ಮುಂದೆ ಕುಳಿತು ಮನದುಂಬಿ ಹಾಡುವಂತೆ ಆಶೀರ್ವದಿಸಿ ಎಂದುಪ್ರಾರ್ಥಿಸುತ್ತಿದ್ದೆ. ಆಗ ಸ್ನೇಹಿತರೇ ಮಿಂಚಿನಂತೆ ಮಂತ್ರಾಲಯದಿಂದ ಆತ್ಮೀಯ ಸೋದರ ನರಸಿಂಹ ಆಚಾರ್ ಅವರ ಕರೆ ಬಂತು. ಕರೆ ಸ್ವೀಕರಿಸಿದಾಗ ಬೃಂದಾವನ ದರ್ಶನವಾಯಿತು" ಎಂದಿದ್ದಾರೆ.

ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಜಗ್ಗೇಶ್ ಈ ಸಂಬಂಧ ರಾಯರ ಬೃಂದಾವನದ ಚಿತ್ರದ ಜತೆಗೆ ವಿವರ ಹಂಚಿಕೊಂಡಿದ್ದಾರೆ.

"ನೆನೆದವರ ಮನದಲ್ಲಿ ಗುರುರಾಯ: ಸ್ನೇಹಿತರೆ ಇಂದು ನನ್ನ ರಾಯರ ನಡುವೆ ನಡೆದ ಮರೆಯಲಾಗದ ಘಟನೆ!

"ಪರಿಮಳ 9ಘಂಟೆಗೆ ನನ್ನ ಏಕಾಂತ ಜಾಗದಲ್ಲಿ ಊಟ ಬಡಿಸಿ online ಕೆಲಸಕ್ಕೆ ತನ್ನ ಹಾಲಿಗೆ ಹೋದಳು!ನಾನು ಊಟ ಮುಗಿಸಿ #ಒಂದು ಬಾರಿ ಸ್ಮರಣೆ ಸಾಲದೆ ಹಾಡು ಕೇಳುತ್ತ ರಾಯರ ಚಿತ್ರಪಟ ನೋಡುತ್ತ ಮಂತ್ರಮುಗ್ಧನಾಗಿ ಧ್ಯಾನದಲ್ಲಿ ಕೂತುಬಿಟ್ಟೆ!ಆಗ ನನ್ನ ಮನಸಿನಲ್ಲಿ ರಾಯರ ಜೊತೆ ಸಂಭಾಷಣೆ ಶುರುವಾಯಿತು!ರಾಯರೆ ನಾನು ಬದುಕಲ್ಲಿ ಕೇಳಿದ್ದೆಲ್ಲಾ ಕೊಟ್ಟಿದ್ದೀರಿ ಕೊಡುತ್ತಿದ್ದೀರಿ ನಿಮ್ಮ ಭಿಕ್ಷೆಯಿಂದ ನಾನು ಕೋಟ್ಯಾಂತರ ಪ್ರೀತಿಸುವ ಯೋಗ ಪಡೆದಿರುವೆ!ಆದರೆ ಪಾಪಿಯಾದ ನಾನು ನಿಮ್ಮ ಶಾಸ್ತ್ರೋಕ್ತವಾಗಿ ಭಜಿಸುವ ವಿಧ್ಯೆ ಪಡೆಯಲಿಲ್ಲಾ!ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲಾ!ಅಲ್ಪಸ್ವಲ್ಪ ಚಿತ್ರ ಗೀತೆ ಹಾಡುವೆ!ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವಾದಿಸಿ!ಮನತುಂಬಿ ಹಾಡುವಾಸೆ ದಯಮಾಡಿ ಕರುಣಿಸಿ!ಎಂದು ಪ್ರಾರ್ಥಿಸುತ್ತಿದ್ದೆ!

"ಸ್ನೇಹಿತರೆ ಮಿಂಚಿನಂತೆ ಮಂತ್ರಾಲಯ ಆತ್ಮೀಯ ಸಹೋದರ ಮಠದ ಪಿಆರ್ ಓ ನರಸಿಂಹಾಚಾರ್ ರವರ ವಾಟ್ಸ್ ಯಾಪ್ ವೀಡಿಯೋ ಕಾಲ್ ಬಂತು ಕರೆ ಸ್ವೀಕರಿಸಿದಾಗ ಬೃಂದಾವನ ದರ್ಶನ ಆಯಿತು!ಅಳು ತಡೆಯಲಾಗಲಿಲ್ಲಾ ಮನಬಿಚ್ಚಿ ರಾಯರಿಗೆ ಹೇಳಿದೆ ನನ್ನ ಮಾತು ಬೃಂದಾವನಕ್ಕೆ ಕೇಳುವ ಸೌಭಾಗ್ಯ ನನಗೆ ನೀಡಿದ ನಿಮ್ಮ ಕರುಣೆ ಸಾಕು ಈ ಜನ್ಮಕ್ಕೆ ಇನ್ನೆಂದಿಗು ನನಗೆ ಮನುಜನ್ಮ ಬೇಡ ನಿಮ್ಮ ಪಾದದಡಿಯ ದೂಳಾಗಿ ಜನ್ಮಕೊಡಿ ಸಾಕು ಎಂದು ಪ್ರಾರ್ಥಿಸಿ! ನರಸಿಂಹಾಜಾರ್ ರವರಿಗೆ ಕೇಳಿದೆ ಈ ಸರಿಹೊತ್ತಲ್ಲಿ ರಾಯರ ಬೃಂದಾವನ ದರ್ಶನ ನನಗೆ ಮಾಡಿಸಲು ಏನು ಪ್ರೇರಣೆ ಆಯಿತು ಎಂದೆ!

"ಅದಕ್ಕೆ ಅವರು ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೆ ನಿಂತಿದ್ದೆ ಇದ್ದಕ್ಕಿದ್ದಂತೆ ಜಗ್ಗೇಶನಿಗೆ ಬೃಂದಾವನ ತೋರಿಸುವಂತೆ ರಾಯರ ಪ್ರೇರಣೆ ಆಯಿತು ಎಂದರು!ಈ ಬರವಣಿಗೆಯಲ್ಲು ಕಣ್ಣೀರು ನಿಂತಿಲ್ಲಾ!ಜನ್ಮಪಾವನ ಹಾಗು ರಾಯರ ಪರಿಚಯಿಸಿ ಕಣ್ಣಿಗೆ ಕಾಣದ ಊರಿಗೆ ಹೋದ ನನ್ನ ದೇವತೆ #ಅಮ್ಮನಿಗೆ ಉಸಿರು ನಿಲ್ಲುವವರೆ ಧನ್ಯವಾದ! ಮಾತೃದೇವೋಭವ ಗುರುದೇವೊಭವ! ಕೋಟಿಬಾರಿ ಪ್ರಮಾಣಿಸಿ ಹೇಳುವೆ ರಾಯರು ತಾಯಂತೆ ಮಕ್ಕಳು ಬಯಸಿದಾಗ ಬಂದುಬಿಡುವರು! ಈ ಸಮಯ ಬದುಕಿನ ಆನಂದಮಯ" ಜಗ್ಗೇಶ್ ವಿವರಣೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com