'ಫಾರ್‌ Regn' ನಲ್ಲಿ ಪೃಥ್ವಿ ಅಂಬರ್ ಗೆ ಮಿಲನಾ ನಾಗರಾಜ್ ನಾಯಕಿ

'ದಿಯಾ' ಖ್ಯಾತಿಯ ಪೃಥ್ವಿ ಅಂಬರ್‌ ನಾಯಕನಾಗಿರುವ 'ಫಾರ್ Regn' ಸಿನಿಮಾಗೆ ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಲಿದ್ದಾರೆ.
ಮಿಲನಾ ನಾಗರಾಜ್
ಮಿಲನಾ ನಾಗರಾಜ್

'ದಿಯಾ' ಖ್ಯಾತಿಯ ಪೃಥ್ವಿ ಅಂಬರ್‌ ನಾಯಕನಾಗಿರುವ ಫಾರ್ Regn ಸಿನಿಮಾಗೆ ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಲಿದ್ದಾರೆ.

ಶ್ಯಾಡೋ, ಹರಿವಿನ ಹಾದಿ, ಯೆಲ್ಲೋ ಬೋರ್ಡ್‌ ಮುಂತಾದ ಶಾರ್ಟ್ ಮೂವೀಗಳನ್ನು ಮಾಡಿರುವ ನವೀನ್‌  'ಫಾರ್‌ Regn'ಮೂಲಕ ನಿರ್ದೇಶಕರಾಗುತ್ತಿದ್ದಾರೆ. ನವೀನ್‌ ರಾವ್ ಇದರ ನಿರ್ಮಾಣ ಮಾಡುತ್ತಿದ್ದು, ತಬಲಾ ನಾಣಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ನಲ್ಲಿ ಶೂಟಿಂಗ್ ಶುರುವಾಗಲಿದೆ.

ನವ ನಿರ್ದೇಶಕ ನವೀನ್ ದ್ವಾರಕನಾಥ್ ನಿರ್ದೇಶನ ಮಾಡಲಿರುವ 'ಫಾರ್‌ Regn' ಚಿತ್ರಕ್ಕೆ ಪೃಥ್ವಿ ಹೀರೋ ಅನ್ನೋದು ಈ ಹಿಂದೆಯೇ ಬಹಿರಂಗವಾಗಿತ್ತು. ಇದೀಗ ನಾಯಕಿಯಾಗಿ ಮಿಲನಾ ಆಯ್ಕೆಯೂ ಅಂತಿಮಗೊಂಡಿದೆ. 'ಲವ್‌ ಮಾಕ್‌ಟೇಲ್‌' ನಂತರ ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿರುವ ಮಿಲನಾ, 'ಫಾರ್‌ Regn' ಒಪ್ಪಿಕೊಳ್ಳುವುದಕ್ಕೂ ಮುನ್ನ 20 ಸ್ಕ್ರಿಪ್ಟ್‌ಗಳನ್ನು ಕೈಬಿಟ್ಟಿದ್ದರಂತೆ!

'ಎಲ್ಲ ಸಿನಿಮಾಗಳನ್ನು ಮಾಡಬೇಕು ಎಂದು ನಾನು ಅಂದುಕೊಂಡಿಲ್ಲ. ಸದ್ಯ 'ಲವ್‌ ಮಾಕ್‌ಟೇಲ್ 2' ಕೆಲಸಗಳು ನಡೆಯುತ್ತಿವೆ. ನಾನು ಅದರ ಸಹ ನಿರ್ಮಾಪಕಿ ಕೂಡ. ಅದಕ್ಕೂ ಸಮಯ ನೀಡಬೇಕಿದೆ. ಉತ್ತಮ ಸ್ಕ್ರಿಪ್ಟ್‌ ಅನ್ನು ಆಯ್ಕೆ ಮಾಡಲು ಸಮಯ ತೆಗೆದುಕೊಂಡಿದ್ದೆ. 'ಫಾರ್‌ Regn'ವಿಭಿನ್ನ ಸಿನಿಮಾ ಮತ್ತು ನನಗೆ ಒಳ್ಳೆಯ ಆಯ್ಕೆ ಆಗಿದೆ ಎಂದಿದ್ದಾರೆ ಮಿಲನಾ ನಾಗರಾಜ್. 

ಈ ಸಿನಿಮಾವನ್ನು ಮಿಲನಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಶೀರ್ಷಿಕೆಯಂತೆ. ಇದೊಂದು ಕ್ಲೀನ್ ಫ್ಯಾಮಿಲಿ ಎಂಟರ್‌ಟೇನಿಂಗ್ ಸಿನಿಮಾವಾಗಿದ್ದು, ಕಾಮಿಡಿಯೂ ಇದೆಯಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com