ಮಂಗಳೂರು ಡ್ರಗ್ಸ್ ಪ್ರಕರಣ: ಸಿಸಿಬಿ ಎದುರು ನಟಿ, ನಿರೂಪಕಿ ಅನುಶ್ರೀ ಹಾಜರ್

ಮಂಗಳೂರು ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ವಿಚಾರಣೆಗೆ ಗೈರಾಗಿದ್ದ ಸ್ಯಾಂಡಲ್ ವುಡ್ ನಟಿ ನಿರೂಪಕಿ ಅನುಶ್ರೀ ಇಂದು ಹಾಜರಾಗಿದ್ದಾರೆ.
ಅನುಶ್ರೀ
ಅನುಶ್ರೀ
Updated on

ಮಂಗಳೂರು: ಮಂಗಳೂರು ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ವಿಚಾರಣೆಗೆ ಗೈರಾಗಿದ್ದ ಸ್ಯಾಂಡಲ್ ವುಡ್ ನಟಿ ನಿರೂಪಕಿ ಅನುಶ್ರೀ ಇಂದು ಹಾಜರಾಗಿದ್ದಾರೆ.

ಶುಕ್ರವಾರ ಸಿಸಿಬಿ ವಿಚಾರಣೆಗೆ ಹಾಜರಾಗಬೇಕಿದ್ದ ಅವರು, ನಿನ್ನೆ ಬೆಂಗಳೂರಿನಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಮಂಗಳೂರು ತಲುಪಿದ ನಂತರ ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು. ಇಂದು ಬೆಳಗ್ಗೆಯೇ ಮಂಗಳೂರು ಪೆಣಂಬೂರು ಠಾಣೆಗೆ ಹಾಜರಾಗಿದ್ದಾರೆ. ಡಿಸಿಪಿ ವಿನಯ್ ಗಾಂವ್ಕರ್ ಕೂಡ ಕಚೇರಿಗೆ ಆಗಮಿಸಿದ್ದಾರೆ.

ಪಣಂಬೂರಿನಲ್ಲಿರುವ ಉತ್ತರ ಎಸಿಪಿ ಕಚೇರಿಯಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡದಿಂದ ನಿರೂಪಕಿ ಅನುಶ್ರೀ ವಿಚಾರಣೆ‌ ನಡೆಯಲಿದೆ ಎನ್ನಲಾಗಿದೆ. ಗಾಂಜಾ ಪ್ರಕರಣದಲ್ಲಿ ಬಂಧಿತರಾದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ, ಆತನ ಆಪ್ತ ತರುಣ್ ಸಿಸಿಬಿ ವಿಚಾರಣೆ ವೇಳೆ ನಟಿ ಅನುಶ್ರೀ ಅವರು ತಮ್ಮೊಂದಿಗೆ ಮಾದಕ ವಸ್ತು ಸೇವನೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com