ಮತ್ತೆ ಅಖಾಡಕ್ಕೆ ಎಂಟ್ರಿ: ಆಗಸ್ಟ್ 10ರಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ಶುರು!

ಕೊರೋನಾ ಸುದೀರ್ಘ ಲಾಕ್ ಡೌನ್ ಬಳಿಕ ಇದೀಗ ಕನ್ನಡ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಮರಳು ಸಜ್ಜಾಗುತ್ತಿದೆ. ಹೌದು ಕನ್ನಡದ ಸಾಲು ಸಾಲು ಚಿತ್ರಗಳು ಚಿತ್ರೀಕರಣಕ್ಕೆ ರೆಡಿಯಾಗುತ್ತಿವೆ. ಈ ಪೈಕಿ ಶಿವರಾಜ್‌ಕುಮಾರ್ ಅವರ ಭಜರಂಗಿ 2 ಚಿತ್ರವು ಸೇರಿದೆ. 

Published: 04th August 2020 10:58 AM  |   Last Updated: 04th August 2020 10:58 AM   |  A+A-


Shivanna

ಶಿವರಾಜ್ ಕುಮಾರ್

Posted By : Vishwanath S
Source : The New Indian Express

ಕೊರೋನಾ ಸುದೀರ್ಘ ಲಾಕ್ ಡೌನ್ ಬಳಿಕ ಇದೀಗ ಕನ್ನಡ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಮರಳು ಸಜ್ಜಾಗುತ್ತಿದೆ. ಹೌದು ಕನ್ನಡದ ಸಾಲು ಸಾಲು ಚಿತ್ರಗಳು ಚಿತ್ರೀಕರಣಕ್ಕೆ ರೆಡಿಯಾಗುತ್ತಿವೆ. ಈ ಪೈಕಿ ಶಿವರಾಜ್‌ಕುಮಾರ್ ಅವರ ಭಜರಂಗಿ 2 ಚಿತ್ರವು ಸೇರಿದೆ. 

ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಶಿವರಾಜ್ ಕುಮಾರ್ ಸಜ್ಜಾಗುತ್ತಿದ್ದಾರೆ. ನಿರ್ದೇಶಕ ಹರ್ಷ ಆಗಸ್ಟ್10 ರಿಂದ ಉಳಿದ ಭಾಗಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ.

ಭಜರಂಗಿ 2 ಚಿತ್ರದ ಶೂಟಿಂಗ್ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಪ್ರಾರಂಭವಾಗಲಿದ್ದು, ಅಲ್ಲಿ ತಂಡವು ಬೃಹತ್ ಸೆಟ್ ನಿರ್ಮಿಸುತ್ತಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯಲಿದ್ದು 12 ದಿನಗಳ ವೇಳಾಪಟ್ಟಿಯನ್ನು ಯೋಜಿಸಲಾಗಿದ್ದು ಈ ಸ್ಟುಡಿಯೋದಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದಾರೆ ಎಂದು ಹರ್ಷ ಹೇಳಿದ್ದಾರೆ.

ಶಿವಣ್ಣನಿಗೆ ಸೆಟ್‌ಗಳಿಗೆ ಹಿಂತಿರುಗುತ್ತಿದ್ದು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿವಣ್ಣ ನಮ್ಮ ಎನರ್ಜಿ ಬೂಸ್ಟರ್. ಪ್ರೊಡಕ್ಷನ್ ಹೌಸ್, ಜಯನ್ನಾ ಫಿಲ್ಮ್ಸ್, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ನಾವು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದರು. 

ಚಿತ್ರೀಕರಣ ಪ್ರಾರಂಭಿಸಿದ ಇತರ ಕನ್ನಡ ಚಿತ್ರಗಳಲ್ಲಿ ಸುದೀಪ್ ಅಭಿನಯದ ಫ್ಯಾಂಟಮ್ ಸಹ ಸೇರಿದೆ. ಫ್ಯಾಂಟಮ್ ಚಿತ್ರದ ಚಿತ್ರೀಕರಣ ತೆಲಂಗಾಣದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದೆ. ಮತ್ತೊಂದೆಡೆ, ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆಜಿಎಫ್ ಅಧ್ಯಾಯ 2 ಆಗಸ್ಟ್ ಮಧ್ಯಭಾಗದಲ್ಲಿ ಚಿತ್ರೀಕರಣ ಪುನರಾರಂಭಗೊಳ್ಳಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp