ಕೊಲಂವು ಕೋಕಿಲ ಚಿತ್ರದ ರಿಮೇಕ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ!

ಕೊರೋನಾ ಪರಿಸ್ಥಿತಿ ಚಿತ್ರರಂಗದ ಮೇಲೆ ಭಾರೀ ಪರಿಣಾಮ ಬೀರಿದ್ದರೂ, ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಖುಷಿಯಾಗಿದ್ದು ಒಂದಲ್ಲ ಒಂದು ದು ಸುದ್ದಿ ಕೊಡುತ್ತಲೇ ಇದ್ದಾರೆ. 
ರಚಿತಾ ರಾಮ್
ರಚಿತಾ ರಾಮ್

ಕೊರೋನಾ ಪರಿಸ್ಥಿತಿ ಚಿತ್ರರಂಗದ ಮೇಲೆ ಭಾರೀ ಪರಿಣಾಮ ಬೀರಿದ್ದರೂ, ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಖುಷಿಯಾಗಿದ್ದು ಒಂದಲ್ಲ ಒಂದು ದು ಸುದ್ದಿ ಕೊಡುತ್ತಲೇ ಇದ್ದಾರೆ. 

ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ರಚಿತಾರಾಮ್ ಅವತು ತಮ್ಮ ಅಭಿಮಾನಿಗಳಿಗೆ ಖುಷಿಕೊಡುವ ವಿಚಾರವನ್ನು ಹಂಚಿಕೊಂಡಿದ್ದಾರೆ. 

2018ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಸೂಪರ್ ಹಿಟ್ ಚಿತ್ರವೊಂದರ ಕನ್ನಡ ಅವತರಿಣಿಕೆಯಲ್ಲಿ ರಚಿತಾರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕೊಲಂವು ಕೋಕಿಲ ಚಿತ್ರದ ರಿಮೇಕ್ ನಲ್ಲಿ ರಚಿತಾ ರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ತಮಿಳಿನ ಬಿಡುಗಡೆಗೊಂಡಿರುವ ಕೊಲಂವು ಕೋಕಿಲ ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದು, ಈ ಪಾತ್ರದಲ್ಲಿ ಡಿಂಪಲ್ ಕ್ವೀನ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ಕನ್ನಡ್ ಗೊತ್ತಿಲ್ಲ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಆರ್.ಜೆ ಮಯೂರ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು, ಚಿತ್ರ ಮಹಿಳಾ ಪ್ರಧಾನ ಸಿನಿಮಾವಾಗಿರಲಿದೆ ಎಂದು ತಿಳಿದುಬಂದಿದೆ. 

ತಮಿಳು ಸಿನಿಮಾ ತಂಡದ ಬಳಿ ರೈಟ್ಸ್ ಬಗೆಗಿನ ಮಾತುಕತೆ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ತಮ್ಮ ಅಭಿಮಾನಿಗಳಿಗೆ ರಚಿತಾ ಮತ್ತೊಂಡು ಉತ್ತಮ ಚಿತ್ರವನ್ನು ಉಡುಗೊರೆಯಾಗಿ ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com