ಆದಿಪುರಷನ ಅವತಾರ ತಾಳಿದ ಬಾಹುಬಲಿ: ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ಪ್ರಭಾಸ್, ಕನ್ನಡದಲ್ಲೂ ಬಿಡುಗಡೆಯಾಗಲಿದೆ ಚಿತ್ರ

ಭಾರತದ ಬಹುಬೇಡಿಕೆ ನಟರಾಗಿರುವ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ವೊಂದನ್ನು ನೀಡಿದ್ದು, ತಮ್ಮನೇ 22ನೇ ಸಿನಿಮಾ ಹೆಸರನ್ನು ಬಹಿರಂಗಪಡಿಸಿದ್ದಾರೆ. 

Published: 18th August 2020 12:15 PM  |   Last Updated: 18th August 2020 12:15 PM   |  A+A-


Poster of the film 'Adipurush'

ಆದಿಪುರುಷ್ ಚಿತ್ರದ ಪೋಸ್ಟರ್

Posted By : manjula
Source : ANI

ನವದೆಹಲಿ: ಭಾರತದ ಬಹುಬೇಡಿಕೆ ನಟರಾಗಿರುವ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ವೊಂದನ್ನು ನೀಡಿದ್ದು, ತಮ್ಮನೇ 22ನೇ ಸಿನಿಮಾ ಹೆಸರನ್ನು ಬಹಿರಂಗಪಡಿಸಿದ್ದಾರೆ. 

ನಿರ್ದೇಶಕ ಓಂ ರಾವತ್ ನಿರ್ದೇಶನದ ಆದಿಪುರುಷ ಸಿನಿಮಾದಲ್ಲಿ ಪೌರಾಣಿಕ ಪಾತ್ರದಲ್ಲಿ ಪ್ರಭಾಸ್ ಅವರು ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವು ಪ್ರಭಾಸ್ ಅವರ 22ನೇ ಸಿನಿಮಾವಾಗಿದೆ. 

ಚಿತ್ರದ ಟೈಟಲ್ ಪೋಸ್ಟರ್'ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದು ಅಧರ್ಮದ ವಿರುದ್ಧ ಗೆಲುವು ಸಾಧಿಸಿದ್ದರ ಸಂಭ್ರಮ ಎಂಬ ಟ್ಯಾಗ್ ಲೈನ್'ನ್ನು ನೀಡಲಾಗಿದೆ. ಪೋಸ್ಟರ್'ನ್ನು ಗಮನಿಸಿದರೆ ಚಿತ್ರವೊಂದು ಸಾಹಸಮಯ ಸಿನಿಮಾವಾಗಿರಲಿದೆ ಎಂದು ಹೇಳಲಾಗುತ್ತಿದೆ. 

ಈ ಹಿಂದೆ ಬಾಹುಬಲಿಯಾಗಿ ಕಾಣಿಸಿಕೊಂಡಿದ್ದ ಪ್ರಭಾಸ್ ಅವರು ಆದಿಪುರುಷ್ ಚಿತ್ರದಲ್ಲಿ ಪೌರಾಣಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸಿನಿಮಾದ ಪೋಸ್ಟರ್ ನೋಡಿದರೆ, ಪ್ರಭಾಸ್ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಪೋಸ್ಟರ್ ನಲ್ಲಿ ಬಿಲ್ಲು ಹಿಡಿದ ರಾಮ. ಹನುಮಂತ ಹಾಗೂ ಹತ್ತು ತಲೆಗಳ ರಾವಣನ ಚಿತ್ರಗಳಿರುವುದು ಕಂಡು ಬಂದಿದೆ. ಈ ಸಿನಿಮಾ ಕುರಿತಾಗಿ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಕಳೆದ ರಾತ್ರಿ ಪ್ರಭಾಸ್ ಹಾಗೂ ಓಂ ರಾವತ್ ಅವರೇ ಈ ಎಲ್ಲಾ ಸುದ್ದಿಗಳಿಗೂ ಸ್ಪಷ್ಟತೆಗಳನ್ನು ನೀಡಿದ್ದಾರೆ. 

ಅಜಯ್ ದೇವಗನ್ ಜೊತೆ ತಾನಾಜಿಯಂತಹ ಐತಿಹಾಸಿಕ ಹಿಟ್ ಸಿನಿಮಾ ಕೊಟ್ಟಿರುವ ನಿರ್ದೇಶಕ ಓಂ ರಾವತ್ ಅವರು ಇದೀಗ ಪೌರಾಣಿಕ ಸಿನಿಮಾಗೆ ಕೈ ಹಾಕಿದ್ದಾರೆ. ಓಂ ರಾವತ್ ಅವರ ತಾನಾಜಿ ಚಿತ್ರ ಬಾಕ್ಸಾಫಿಸ್ ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಪ್ರಭಾಸ್ ಜೊತೆಗೆ ಮಾಡುತ್ತಿರುವ ಆದಿಪುರುಷ್ ಸಿನಿಮಾ ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿದ್ದು. ನಂತರ ಅದನ್ನು ಕನ್ನಡ, ತಮಿಳು, ಮಲಯಾಳಂ ಸೇರಿದಂದೆ ಇತರೆ ಅಂತರಾಷ್ಟ್ರೀಯ ಭಾಷೆಗಳಿಗೂ ಡಬ್ ಆಗಲಿದೆ ಎಂದು ಹೇಳಲಾಗುತ್ತಿದೆ. 


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp